ಹಾಡಿ ನಲಿದ ಮಕ್ಕಳು…. ಖುಷಿಪಟ್ಟ ಪೋಷಕರು…
ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗಮಯೂರಿ ಕಲಾಶಾಲೆಯು ಕುಂಕುಂ ಫ್ಯಾಷನ್ ಹಾಗೂ ಬಿಗ್ ಮಿಶ್ರ ಪೇಡಾದ ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿ ಖುಷಿಪಟ್ಟರು.
ಸೆ.೩ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆದ ಸ್ಪರ್ಧೆಯನ್ನು ಪುಟಾಣಿ ಕೃಷ್ಣವೇಷಧಾರಿಗಳೇ ಉದ್ಘಾಟಿಸಿದರು. ೫೦ಕ್ಕೂ ಹೆಚ್ಚು ಮಕ್ಕಳು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಪ್ರಾಯೋಜಕರಾದ ಕುಂಕುಮ್ ಫ್ಯಾಷನ್ ಮಾಲಕ ಧನರಾಮ್ ಪಟೇಲ್, ಸ್ಪರ್ಧೆಯ ತೀರ್ಪುಗಾರರಾದ ಉಪನ್ಯಾಸಕಿ ಶ್ರೀಮತಿ ಸುಶ್ಮಿತಾ ಜಾಕಿ, ಸಂಪನ್ಮೂಲ ವ್ಯಕ್ತಿ ಶಶಿಧರ ಎಂ. ಜೆ, ಕಲರ್ಸ್ ಟೈಲರ್ಸ್ ಮಾಲಕಿ ಶ್ರೀಮತಿ ರಾಜೇಶ್ವರಿ ಶುಭಕರ, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್,
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು, ಸುದ್ದಿ ಬಿಡುಗಡೆ ಪತ್ರಿಕೆಯ ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ್ ನಿರಬಿದರೆ ಉಪಸ್ಥಿತರಿದ್ದರು.
ಒಂದರಿಂದ ಮೂರು ವರ್ಷದ ಕಿರಿಯರ ವಿಭಾಗದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದೀಪಾಂಶಿ ವಿಕಾಸ್ ಮರಂಗಳ, ದ್ವಿತೀಯ ಬಹುಮಾನವನ್ನು ವರ್ಷಿಕಾ ಕೆ. ಕೆ ಕಾಯರ್ತೋಡಿ ಪಡೆದುಕೊಂಡರೆ, ಮೂರರಿಂದ ಆರು ವರ್ಷದೊಳಗಿನ ಹಿರಿಯರ ವಿಭಾಗದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹವೀಶ್ ಕಂಜಿಪಿಲಿ, ದ್ವಿತೀಯ ಬಹುಮಾನವನ್ನು ಸಮೃದ್ಧಿ ಎಸ್ ಗೂನಡ್ಕ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸುದ್ದಿ ವೆಬ್‌ಸೈಟ್ ಆಯೋಜಿಸಿದ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನವನ್ನೂ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಗನಿಷ್ಕಾ. ಕೆ, ಖಂಡಿಗೆಮೂಲೆ, ದ್ವಿತೀಯ ಬಹುಮಾನವನ್ನು ಆರುಷ್ ಬಿ. ಬಂದಡ್ಕ ಪಡೆದುಕೊಂಡರು.
ಸೌಮ್ಯ ಆಲಂಕಳ್ಯ ಪ್ರಾರ್ಥಿಸಿ, ಸುದ್ದಿ ಬಿಡುಗಡೆಯ ಜಾಹೀರಾತು ವಿಭಾಗದ ಪ್ರಜ್ಞ ಎಸ್ ನಾರಾಯಣ್ ಸ್ವಾಗತಿಸಿ, ಸುದ್ದಿ ಚಾನೆಲ್‌ನ ಪೂಜಾ ವಿತೇಶ್ ಕೋಡಿ ವಂದಿಸಿದರು. ಸುದ್ದಿ ವೆಬ್‌ಸೈಟ್‌ನ ಜಯಶ್ರೀ ಕೊಯಿಂಗೋಡಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬೃಂದಾ ಪೂಜಾರಿ ಮುಕ್ಕೂರು ಕಾರ್ಯಕ್ರಮ ನಿರ್ವಹಿಸಿದರು. ಶರೀಫ್ ಜಟ್ಟಿಪಳ್ಳ ಸಹಕರಿಸಿದರು.