ಸುಳ್ಯದ ಉದ್ಯಮಿ ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ನೂತನ ಗೃಹಪ್ರವೇಶ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು ಕಾರ್ಯಕ್ರಮಕ್ಕೆ ಆ ದಿನ ವಿಧಾನಸಭಾಧ್ಯಕ್ಷ ಅಗಮಿಸಿರಲಿಲ್ಲ ಸೆ.3 ರಂದು ಸುಳ್ಯಕ್ಕೆ ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ರ ಪುತ್ರ ಕರಣ್ ರವರ ವಿವಾಹ ಕಾರ್ಯಕ್ರಮಕ್ಕೆ ಅಗಮಿಸಿ ಶುಭಹಾರೈಸಿ ನಂತರ ಜಟ್ಟಿಪಳ್ಳ ರಸ್ತೆಯಲ್ಲಿರುವ ಹರ್ಲಡ್ಕ ವಿಲ್ಲಾಕ್ಕೆ ಭೇಟಿ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸಭಾಧ್ಯಕ್ಷಕರಾದ ಯು ಟಿ ಖಾದರ್, ಹಾಗೂ ಮಾಜಿ ಸಚಿವರಾದ ರಮನಾಥ ರೈ ಯವರನ್ನು ಹರ್ಲಡ್ಕ ವಿಲ್ಲಾದಲ್ಲಿ ಲತೀಫ್ ಹರ್ಲಡ್ಕ ರವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಸಂಯೊಜಕ ಎಸ್ ಸಂಶುದ್ದೀನ್,ಕೆ ಪಿ ಸಿ ಸಿ ಅಲ್ಪಸಂಖ್ಯಾತ ಘಟಕ ರಾಜ್ಯ ಕಾರ್ಯದರ್ಶಿ ಕೆ ಎಂ ಮುಸ್ತಫಾ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಕಾಂಗ್ರೆಸ್ ಮುಖಂಡರಾದ ಶಾಫಿ ಕುತ್ತಮೊಟ್ಟೆ, ಸತ್ಯಪ್ರಸಾದ್ ಆಡಿಂಜ,ಇಸ್ಮಾಯಿಲ್ ಪಡ್ಪಿನಂಗಡಿ,ಜಿ.ಕೆ ಹಮೀದ್, ಎಸ್.ಕೆ ಹನೀಫ್,ಬಶೀರ್ ತರಕಾರಿ, ಬಾಬ ಹಾಜಿ ಎಲಿಮಲೆ, ಮೊದಲಾದವರು ಉಪಸ್ಥಿತರಿದ್ದರು.