ಕೇರಳ ಭಾಗದಲ್ಲಿ ಚಿನ್ನ ಕಳ್ಳತನದ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳ್ಳತನ ಮಾಡಿದ ಚಿನ್ನವನ್ನು ಕಳ್ಳ ಸುಳ್ಯದಲ್ಲಿ ಮಾರಾಟ ಮಾಡಿರುವ ಬಗ್ಗೆ ಅವರ ತನಿಖೆಯ ಸಂದರ್ಭ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಇದರ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸೆಪ್ಟೆಂಬರ್ 2 ರಂದು ಸುಳ್ಯಕ್ಕೆ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕೇರಳ ಭಾಗದಿಂದ ಬಂದಂತಹ ಪೊಲೀಸರ ಜೀಪು ಸೆಪ್ಟೆಂಬರ್ 2 ರಂದು ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ತಮ್ಮ ಜೀಪನ್ನು ನಿಲ್ಲಿಸಿ ಕಳ್ಳ ಚಿನ್ನವನ್ನು ಮಾರಾಟ ಮಾಡಿದ್ದಾನೆ ಎನ್ನಲಾದ ಸಂಸ್ಥೆಯಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿರುವುದಾಗಿ ತಿಳಿದು ಬಂದಿದೆ.