ಆ.5 ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಗುರುಗಳೆಡೆಗೆ – ನಮ್ಮ ನಡೆ’ ಕಾರ್ಯಕ್ರಮ

0

ಪ್ರೊ.ಡಿ. ಜವರೇಗೌಡರಿಗೆ ಗುರುವಂದನೆ

ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾಗಿ, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ‌ಗುರುಗಳಾಗಿ, ನಿಷ್ಠೆ ಪ್ರಾಮಾಣಿಕತೆಯ ಮೇರು‌ ವ್ಯಕ್ತಿತ್ವದ ಖ್ಯಾತ ನಾಟಕ‌ ಕಲಾವಿದ, ನಿವೃತ್ತರಾಗಿರುವ ಪ್ರೊ.ಡಿ.ಜವರೇಗೌಡರಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುಗಳೆಡೆಗೆ – ನಮ್ಮನೆಡೆ ಎಂಬ ಕಾರ್ಯಕ್ರಮ ದಲ್ಲಿ ಸೆ.5 ರ ಸಂಜೆ 5.30 ಕ್ಕೆ ಜವರೇಗೌಡರ ಮನೆಗೆ ತೆರಳಿ ಗುರುವಂದನೆಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಘಟಕರಾದ ಚಂದ್ರಶೇಖರ ಪೇರಾಲು‌ ಹಾಗೂ ದಿನೇಶ್ ಮಡಪ್ಪಾಡಿ ಯವರು ತಿಳಿಸಿದ್ದಾರೆ. ಅವರ ಶಿಷ್ಯವೃಂದದವರು ಭಾಗವಹಿಸಬಹುದೆಂದು‌ ವಿನಂತಿಸಿಕೊಂಡಿದ್ದಾರೆ.