ಸುಳ್ಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ

0

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಹಾಗೂ ರೋಟರಿ ವಿದ್ಯಾ ಸಂಸ್ಥೆಗಳು ಸುಳ್ಯ ಇದರ ಸಹಯೋಗದಲ್ಲಿ , ಸಿರಿ ಧಾನ್ಯಗಳು ಅಧ್ಬುತ ಆಹಾರ ಅಥವಾ ರೂಢಿಗತ ಪಥ್ಯಾಹಾರ
ಎಂಬ ವಿಷಯದ ಕುರಿತು ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ 2023-2024 ಆ.31 ರಂದು ರೋಟರಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಸುಳ್ಯದ ಅಧ್ಯಕ್ಷ ರೊ.ಆನಂದ ಖಂಡಿಗ ವಹಿಸಿ ಮಾತನಾಡಿ “ಶಾಲೆಗಳಲ್ಲಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಗಳಿಗೆ ಉತ್ತೇಜನ ನೀಡಿದಂತಾಗುತ್ತದೆ” ಎಂದು ಶುಭ ಹಾರೈಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಮೇಶ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ವಿದ್ಯಾ ಸಂಸ್ಥೆಯ ಸಂಚಾಲಕ ರೊ. ಗಿರಿಜಾಶಂಕರ್ ತುದಿಯಡ್ಕ ಮಾತನಾಡಿ “ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸ ಬಹುದು ” . ಎಂದು ಶುಭ ಹಾರೈಸಿದರು.
ನಿರ್ಣಾಯಕರಾಗಿ ಆಗಮಿಸಿದ್ದ ಶ್ರೀಮತಿ ರಮಾ.ವಿ.ಕೆ ,
ಅರಂತೋಡು ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಊ
ಪುರಂದರ ನಾರಾಯಣ ಭಟ್, ಅತ್ಯುತ್ತಮ ಶಿಕ್ಷಕ, ರಾಷ್ಟ್ರಪ್ರಶಸ್ತಿ ಪುರಸ್ಕೃತರು ಬಾಳಿಲ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕೆ. ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ
ವಿದ್ಯಾರ್ಥಿನಿಯರಾದ ಭಾನವಿ ಕೊಯಿಂಗಾಜೆ, ಯಶಸ್ವಿ.ಪಿ.ಭಟ್, ಪ್ರೇರಣಾ ಶೆಟ್ಟಿ, ವಂಶಿಕಾ,ಸಿಂಚನ ಪ್ರಾರ್ಥಿಸಿದರು.ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿದರು. ಶ್ರೀಮತಿ ಸಂಧ್ಯಾ ಶಿಕ್ಷಣ ಸಂಯೋಜಕರು , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಕಲಾ ಶಿಕ್ಷಕ ಶ್ರೀಹರಿ ಪೈಂದೋಡಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಉಷಾ.ಕೆ., ಶ್ರೀಮತಿ ಶಾಲಿನಿ ರಾಮಕೃಷ್ಣ, ಶ್ರೀಮತಿ ಬಿಂದು ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ:
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ
ಶಿಕ್ಷಣ ಸಂಯೋಜಕಿ
ಶ್ರೀಮತಿ ಸಂಧ್ಯಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕೆ ಎಸ್, ನಿರ್ಣಾಯಕರಾಗಿದ್ದ ಶ್ರೀಮತಿ ರಮಾ.ವಿ.ಕೆ, ನಿವೃತ್ತ ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು ಅರಂತೋಡು ಹಾಗೂ ಶ್ರೀ ಪುರಂದರ ನಾರಾಯಣ ಭಟ್ , ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಬಾಳಿಲ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ :ಪ್ರಥಮ ಸ್ಥಾನವನ್ನು ವರ್ಷ ಬೇಕಲ್ , ಕುಮಾರಸ್ವಾಮಿ ಪ್ರೌಢಶಾಲೆ ಸುಬ್ರಹ್ಮಣ್ಯ, ದ್ವಿತೀಯ ಸ್ಥಾನವನ್ನು ಪ್ರಣಮ್ಯ. ಎನ್.ಆಳ್ವ ರೋಟರಿ ಪ್ರೌಢಶಾಲೆ, ಸುಳ್ಯ, ತೃತೀಯ ಸ್ಥಾನವನ್ನು ಯಕ್ಷಿತಾ .ಬಿ.ಎನ್. ಸರಕಾರಿ ಪ್ರೌಢಶಾಲೆ ಐವರ್ನಾಡು ಇವರು ಪಡೆದುಕೊಂಡರು .
ಶಿಕ್ಷಕಿಯರಾದ ಶ್ರೀಮತಿ ಉಷಾ.ಕೆ. , ಶ್ರೀಮತಿ ಶಾಲಿನಿ ರಾಮಕೃಷ್ಣ, ಶ್ರೀಮತಿ ಬಿಂದು ಕಾರ್ಯಕ್ರಮ ನಿರ್ವಹಿಸಿದರು.