ರಶ್ಮಿ ಗೌಡ ಪೀಚೆಮನೆ ಪೆರಾಜೆ
ಶ್ರೀ ಕೃಷ್ಣನ ಕಾಲದಲ್ಲಿ ಗುರುವನ್ನು ಹುಡುಕಿಕೊಂಡು ಕಾಡಿಗೆ ಹೋಗಿ ಅವರ ಸೇವೆ ಮಾಡುತ್ತಾ ವಿಧ್ಯೆ ಕಲಿಯಬೇಕಾಗಿತ್ತು. ಕೌರವರ ಕಾಲದಲ್ಲಿ ಗುರುವೇ ರಾಜಶ್ರಯವನ್ನು ಹುಡುಕಿಕೊಂಡು ಬಂದು ರಾಜಸ್ಥಾನದ ಹಂಗಿನಲ್ಲಿ ಬಾಳುತ್ತಾ ಇರುತಿದ್ದರು. ಏಕಲವ್ಯನಂಥ ಶಿಷ್ಯನಿಗೆ ವಿದ್ಯೆಯನ್ನು ವಂಚಿಸುವ, ಅರ್ಜುನನ್ನು ಲೋಕ ವೀರನನ್ನಾಗಿ ಮಾಡುವ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ನಿಧರ್ಶನಗಳು ಪುರಾಣಗಳಲಿ ಕಂಡರೂ,ಯುಗ ಯುಗಗಳು ಕಳೆದರೂ ಶಿಕ್ಷಣ ಮತ್ತು ಅದನ್ನು ಕಲಿಸುವ ಗುರುಗಳ ಸ್ಥಾನ ಬದಲಾಗಿಲ್ಲ.. ಬದಲಾಗುವುದಿಲ್ಲ.. ” ಗುರು ಎಂದರೆ ವ್ಯಕ್ತಿಯಲ್ಲ, ಒಬ್ಬ ಶಕ್ತಿ ಅಜ್ಞಾದ ಕತ್ತಲೆಯ ಕಳೆದು ಸುಜ್ಞಾನಡದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು ” ” *ಎಲ್ಲ ಶಿಕ್ಷಕರಿಗೆ ಶಿಕ್ಷಕದಿನಾಚರಣೆಯ ಶುಭಾಶಯಗಳು” ನಮ್ಮ ದೇಶದ ಹೆಮ್ಮೆಯ ತತ್ವಶಾಸ್ತ್ರಜ್ಞ, ರಾಜನೀತಿಜ್ಞ ಮತ್ತು ಪ್ರಥಮ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ್ದ ಡಾ || ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚಾರಿಸಲಾಗುತ್ತದೆ.ಅವರು ಸ್ವಂತಂ ಶ್ರೇಷ್ಠ ಶಿಕ್ಷರಾಗಿದ್ದರು. ತಾವು ಮಾಡಿದ ಶಿಕ್ಷಕ ವೃತ್ತಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ ಈ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಜೀವನದಲ್ಲಿ ಈಸಬೇಕು,ಇದ್ದು ಜಯಿಸಬೇಕು. ಇದಕ್ಕೆ ಶಿಕ್ಷಕರ ಮಾರ್ಗದರ್ಶನ ಬೇಕೇಬೇಕು.ಹಾಗಾದರೆ ಶಿಕ್ಷಕ ಅಂದರೆ ಯಾರು? ಶಿಸ್ತುಗಾರನಾಗಿ ವಿದ್ಯಾರ್ಥಿಗಳ ಜ್ಞಾನದಾಹಕ್ಕೆ ತಕ್ಕಂತೆ, ಕ್ಷಣ ಕ್ಷಣಕ್ಕೂ ಉಲ್ಲಾಸ ಬರಿತನಾಗಿ, ಕಠಿಣವಾದದ್ದನ್ನೂ ವಿದ್ಯಾರ್ಥಿಗಳ ಮನಸಿಗ್ಗೆ ನಾಟುವಂತೆ ಬಿಡದೇ ಪಟ್ಟಿಸುವನೇ ಶಿಕ್ಷಕ. ಮುದ್ದು ಮಕ್ಕಳ ಮನಸ್ಸನ್ನು ಅರಿತು ಅವರನ್ನ ಪ್ರಗತಿಯೆಡೆಗೆ ಕೊಂಡೊಯ್ಯಬಲ್ಲ ಏಕ್ಯಕ ನೆತಾರನೇ ಶಿಕ್ಷಕ. ಇಂದಿನ ವಿದ್ಯಾರ್ಥಿಗಳಿಗೆ ಗುರುಗಳ ಮೇಲಿನ ಭಕ್ತಿ ದೂರದ ಬೆಟ್ಟ ನುಣ್ಣಗೆಯಂತೆ ಆಗಿದೆ. ನಮ್ಮನ್ನು ಭವಿಷ್ಯದ ಪ್ರಜೆಗಳಾಗಿ ನಿರ್ಮಿಸಿದ ಶಿಕ್ಷರಿಗೆ ಯಾವ ಪುರಸ್ಕಾರವು ಸರಿಸಾಟಿ ಯಾಗಲಾರದು. ಒಂದು ರೀತಿಯಲ್ಲಿ ಸಾಟಿಯಲ್ಲದ ಪರಿಶ್ರಮ. ಈ ಮನುಕುಲಕ್ಕೆ ಅತ್ಯಮೂಲ್ಯ ಸೇವೆಸಲ್ಲಿಸುತ್ತಿರುವವರು ಶಿಕ್ಷಕರು. ಜಗತ್ತಿನಲ್ಲಿ ತಾಯಿಯ ಹೊರತಾಗಿ ಎಲ್ಲ ಸಮಸ್ಯೆಗಳಿಗೆ ದಾರೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕ ಮಾತ್ರ. ಗುರು ವಚನವೇ ಉಪದೇಶ ಗುರು ವಚನವೇ ಭಕ್ತಿ ಗುರು ವಚನವೇ ಮೋಕ್ಷ ಮಾರ್ಗ ಇವು ತಾನು ಪರಮಾರ್ಥ ಕಾಣ ಸರ್ವಜ್ಞ ಸರ್ವಜ್ಞ ಹೇಳಿದ ಈ ಒಂದು ನುಡಿಯಲ್ಲಿ ಗುರುವುವಿನ ಅವಶ್ಯಕತೆ, ಮಾರ್ಗದರ್ಶನ, ಮನಸ್ಸಿನಲ್ಲಿಟ್ಟುಕೊಳ್ಳೋಣ… ಪಾಲಕರು ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ ಆದರೆ ಶಿಕ್ಷಕರು ನಮ್ಮನ್ನು ಯಶಸ್ಸಿನ ಹಾದಿಯಲ್ಲಿ ಕಳುಹಿಸಲು ಪ್ರಯತಿನ್ಸುತ್ತಾರೆ,ಶಿಕ್ಷಕರಿಲ್ಲದೆ ನಾವು ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ.ರೋಗಕ್ಕೆ ಔಷಧಿಯನ್ನು ನೀಡುವ ವೈಧ್ಯಕೀಯ ಕ್ಷೇತ್ರದಲಾಗಲಿ, ಬಾಹ್ಯಕಾಶ ಉಡಾವಣೆಯ ವಿಜ್ಞಾನ ಕ್ಷೇತ್ರದಲಾಗಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ.. ಗುರುವಿಲ್ಲದೆ ನಾವು ಜ್ಞಾನವನ್ನು ಪಡೆಯಲ್ಲು ಸಾಧ್ಯವಿಲ್ಲ ನಿಜ. ಜಗತ್ತಿನಲ್ಲಿ ಗುರುವಿನ ಸ್ಥಾನವನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗಿದೆ.ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಂ, ಗುರು ಸಾಕ್ಷಾತ್ ಪರಬ್ರಹ್ಮ ತಸ್ನೇಯ ಶ್ರೀ ಗುರುವೇ ನಮಃ.:ಎಂದರೆ ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ ಅಂದರೆ ಶಿವ. ಗುರುವು ಪರಬ್ರಹ್ಮನಂತೆ ಎಲ್ಲ ದೇವರುಗಳಲ್ಲಿ ಶ್ರೇಷ್ಠ, ಅಂತಹ ಗುರುವಿಗೆ ನಾವು ನಮಸ್ಕಾರಿಸೋಣ…. – ರಶ್ಮಿ ಗೌಡ ಪೀಚೆಮನೆ ಪೆರಾಜೆ