ಬಾಳಿಲದ ಕೊಡೆಂಕಿರಿಯಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ, ಹಿಂದೂ ಧಾರ್ಮಿಕ ಆಚರಣೆಗಳು ಉಳಿದರೆ ಹಿಂದುತ್ವ ಉಳಿಯುವುಕ್ಕೆ ಸಾಧ್ಯ – ಪುತ್ತಿಲ

0

ಹಿಂದೂ ಧಾರ್ಮಿಕ ಆಚರಣೆಗಳು ಉಳಿದರೆ ಹಿಂದುತ್ವ ಉಳಿಯುವುದಕ್ಕೆ ಸಾಧ್ಯ. ಆ ನಿಟ್ಟಿನಲ್ಲಿ ಇಂತಹ ಆಚರಣೆಗಳಿಗೆ ಮಹತ್ವ ಇದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಅವರು ಸೆ. 6ರಂದು ಬಾಳಿಲ ಗ್ರಾಮದ ಕೊಡೆಂಕಿರಿ ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಮರೆಂಗಾಲ ಇದರ ಆಶ್ರಯದಲ್ಲಿ ನಡೆದ 15ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಮತಾನಾಡಿದರು. ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿದ ಇದರ ಅಧ್ಯಕ್ಷ ಯು. ರಾಧಾಕೃಷ್ಣ ರಾವ್, ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮರೆಂಗಾಲ, ಕಾರ್ಯದರ್ಶಿ ರಾಜ್ ಕಿಶೋರ್, ಖಜಾಂಚಿ ನವೀನ್ ಎಂ. ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮರೆಂಗಾಲರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಪರಮೇಶ್ವರಯ್ಯ ಹೆಗ್ಡೆ ಕಾಂಚೋಡು ಕಾರ್ಯಕ್ರಮ ಉದ್ಘಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಾಳಿಲ ಗ್ರಾ.ಪಂ. ಉಪಾಧ್ಯಕ್ಷ ರಮೇಶ್ ರೈ ಅಗಲ್ಪಾಡಿ, ಮಾಜಿ ತಾ.ಪಂ. ಸದಸ್ಯ ಹರೀಶ್ ರೈ ದೇರಂಪಾಲು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀನಾಥ್ ರೈ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮರೆಂಗಾಲ ಸ್ವಾಗತಿಸಿ, ಸದಸ್ಯ ನಾಗರಾಜ್ ವಂದಿಸಿದರು. ರಾಜೇಶ್ ಸುವರ್ಣ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಶ್ರೀಕೃಷ್ಣ ಅಸಹಾಯಕರಿಗೆ ಸಹಾಯಹಸ್ತ ನೀಡುತ್ತಾ ಬೆಳೆದು ಎಲ್ಲರಿಗೂ ದೇವರಾದರು. ನಾವೂ ಶ್ರೀಕೃಷ್ಣನ ಆದರ್ಶಗಳನ್ನು ಬೆಳೆಸಿಕೊಳ್ಳೋಣ ಆ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ – ಕು. ಭಾಗೀರಥಿ ಮುರುಳ್ಯ
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಸಂಜೆ 6.00 ಗಂಟೆಗೆ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಮರೆಂಗಾಲರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 7.30ರಿಂದ ಲಹರಿ ಸಂಗೀತ ಕಲಾಕೇಂದ್ರ ಐಸಿಟಿ ನೆಲ್ಯಾಡಿ ಇವರಿಂದ ಭಕ್ತಿ ಸಂಗೀತ ರಸಮಂಜರಿ ನಡೆಯಲಿದೆ.