ಹರಿಹರ ಪಲ್ಲತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡರ ದರ್ಮಪತ್ನಿ ದಿl ಮನೋರಮಾ ಅವರ ವೈಕುಂಠ ಸಮಾರಾಧನಾ ಸಮಾರಂಭ ಮೃತರ ಸ್ವಗೃಹದಲ್ಲಿ ಸೆ. 7 ರಂದು ನಡೆಯಿತು.
ಮೃತರ ಬಗ್ಗೆ ಭರತ್ ಮುಂಡೋಡಿರವರು ನುಡಿನಮನ ಸಲ್ಲಿಸಿ ಮಾತನಾಡಿದರು. ಆರಂಭದಲ್ಲಿ ವಿಶ್ವನಾಥ ಮುಂಡೋಡಿ ಪ್ರಸ್ತಾವಿಕ ಮಾತನಾಡಿದರು. ಸೇರಿದ್ದ ಬಂಧುಗಳು ನಿಮಿಷ ಮೌನ ಪ್ರಾರ್ಥನೆ ನೆರವೇರಿಸಿದರು. ಸೇರಿದ್ದ ಬಂಧುಗಳು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನೂರಾರು ಸಂಖ್ಯೆ ಯಲ್ಲಿ ಬಂಧುಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.