ಗೆಳಯರ ಬಳಗ (ರಿ) ದೇವ, ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲ (ರಿ ) ದೇವ, ಸ.ಕಿ.ಪ್ರಾ.ಶಾಲೆ ದೇವ, ಅಂಗನವಾಡಿ ಬೆಂಬಲ ಸಮಿತಿ ದೇವ ಇವುಗಳ ಜಂಟಿ ಆಶ್ರಯದಲ್ಲಿ 33 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಸೆ.6 ರಂದು ದೇವ ಶಾಲಾ ವಠಾರದಲ್ಲಿ ನಡೆಯಿತು.
ಬೆಳಗ್ಗೆ ನಡೆದ ವಿವಿಧ ಸ್ಪರ್ಧೆಗಳ ಉದ್ಟಾಟನೆಯನ್ನು ದೇವ ಶಾಲೆಯ ಮುಖ್ಯ ಶಿಕ್ಷಕ ಜಯಪ್ರಕಾಶ್ ಮುತ್ಲಾಜೆ ಉದ್ಟಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಹಿರಿಯಡ್ಕ, ಗೌರವಾಧ್ಯಕ್ಷ ಯೋಗಿಶ್ ದೇವ , ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷೆ ಕಲಾಪದ್ಮನಾಭ ದೇವ , ಅಂಗನವಾಡಿ ಶಿಕ್ಷಕಿ ಶ್ರೀಮತಿ ಲತಾ ಕೆ.ಎನ್. , ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಕಮಲ ಉಪಸ್ಥಿತರಿದ್ದರು. ಪ್ರಜ್ವಲ್ ಪೊಯ್ಯೆಮಜಲು ಧಾರ್ಮಿಕ ಉಪನ್ಯಾಸ ನೀಡಿದರು.
ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ಅಂಗನವಾಡಿ, ಶಾಲಾ ಮಕ್ಕಳಿಗೆ , ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಕುಂದ ಹಿರಿಯಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಲೋಚನಾ ದೇವ, ಗುತ್ತಿಗಾರು ಪ್ರಾ.ಕೃ. ಪ.ಸ.ಸಂಘದ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ದ.ಕ. ಜಿಲ್ಲಾ ತೆಂಗು ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚೇತನ್, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ದೇವಚಳ್ಳ ಗ್ರಾ.ಪಂ. ಪಿ.ಡಿ.ಒ. ಗುರುಪ್ರಸಾದ್ ಬಿ., ಗ್ರಾ.ಪಂ. ಸದಸ್ಯ ರಮೇಶ್ ಪಡ್ಪು, ಪ್ರಗತಿ ಪರ ಕೃಷಿಕ ವಸಂತ ಕುಮಾರ್ ಬೊಳ್ಳಾಜೆ, ಮಹಿಳಾ ಮಂಡಲ ಅಧ್ಯಕ್ಷೆ ಕಲಾ ಪದ್ಮನಾಭ, ಕಾರ್ಯದರ್ಶಿ ಉಷಾ ಸತೀಶ ಕನ್ನಡಕಜೆ, ಗೆಳೆಯರ ಬಳಗದ ಕಾರ್ಯದರ್ಶಿ ಜಯಂತ ದೇವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ಊರು ಗೌಡ ಬಾಲಕೃಷ್ಣ ಗೌಡ ಮತ್ತು ಒತ್ತು ಗೌಡ ಶೀನಪ್ಪ ಗೌಡ ಪಡ್ಪುರವರನ್ನು ಸಮಾಜ ಸೇವೆಯ ನೆಲೆಯಲ್ಲಿ ಗುರುತಿಸಿ, ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು.
ಹಾಗೂ ಪದವಿ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ದೇವ ಕಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿನಿ ಕು.ಉಪಿತಾ ಇವರನ್ನು ಗೌರವಿಸಲಾಯಿತು.
ಯೋಗೀಶ್ ದೇವ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಗೋಪಾಲಕೃಷ್ಣ ಕನ್ನಡಕಜೆ ವಂದಿಸಿದರು. ಕಾರ್ತಿಕ್ ಡಿ.ಕಾರ್ಯಕ್ರಮ ನಿರೂಪಿಸಿದರು.