ಯುವಸ್ಫೂರ್ತಿ ಸೇವಾ ಸಂಘ(ರಿ) ಕಲ್ಮಡ್ಕ ಇದರ ವತಿಯಿಂದ 8ನೇ ವರುಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2023 ನೇ ಆದಿತ್ಯವಾರ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಆವರಣದಲ್ಲಿ ನಡೆಯಲಿದೆ.
ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಉಪಾಧ್ಯಕ್ಷರಾದ ಬಾಲಪ್ಪ ನಾಯ್ಕ ಕಾಚಿಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗ್ರಾಮ ದೈವ ಶ್ರೀ ನೆಲ್ಲೂರಾಯ ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾದ ವೆಂಕಟ್ರಮಣ ಧರ್ಮಡ್ಕ ಹಾಗೂ ಸಂಸ್ಕಾರ ಅಂಗನವಾಡಿ ಕೇಂದ್ರ ಕಲ್ಮಡ್ಕ ಇದರ ಶಿಕ್ಷಕಿ ಶ್ರೀ ಮತಿ ನಳಿನಿ ಬಾಲಕೃಷ್ಣ ರೈ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಪುಟಾಣಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಸಂಜೆ ಗಂಟೆ 3.00ಕ್ಕೆ ಸರಿಯಾಗಿ ಮುದ್ದು ಮಕ್ಕಳ ಆಕರ್ಷಣೆಯ ಮುದ್ದು ಕೃಷ್ಣ ಸ್ಪರ್ಧೆಯು ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಘದ ಅಧ್ಯಕ್ಷರಾದ ಶಿವರಾಮ ಕೊಳೆಂಜಿಕೋಡಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಮೊಕ್ತೇಸರರಾದ ರಾಮಚಂದ್ರ ಎಡಪತ್ಯ, ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಉಪಾಧ್ಯಕ್ಷರಾದ ಶ್ರೀ ಮತಿ ಮೋಹಿನಿ ಲತೇಶ್ ಮಾಳಪ್ಪಮಕ್ಕಿ ಸಿದ್ದಿವಿನಾಯಕ ಭಜನಾ ಮಂಡಳಿ ಇದರ ಅಧ್ಯರಾದ ಧರ್ಮಪಾಲ ನಡ್ಕ ಹಾಗೂ ಸಾರ್ವಜನಿಕ ದೇವತಾರಾಧಾನಾ ಸಮಿತಿ ಅಧ್ಯಕ್ಷರಾದ ರವೀಂದ್ರ ಗೌಡ ಮಾಳಿಗೆ ಭಾಗವಹಿಸಲಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ತನ್ನ ಶ್ರಮ ಕಾರ್ಯಗಳ ಮೂಲಕ ಅನನ್ಯ ಕೊಡುಗೆಯನ್ನು ನೀಡಿದ ಹಿರಿಯರಾದ ನಾರಾಯಣ ನಾಯ್ಕ ಬೊಳಿಯೂರು ಇವರಿಗೆ ಸನ್ಮಾನ ಪ್ರದಾನ ಹಾಗೂ 2023ರ ದೇಶದ ಪ್ರಧಾನ ಮಂತ್ರಿ ಭಾಗವಹಿಸಿದ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸಿ ಗ್ರಾಮಕ್ಕೆ ಕೀರ್ತಿ ತಂದ ಕುಮಾರಿ ಅನನ್ಯ ಕೆ ಪಾಲಾರು ಇವರಿಗೆ ಯುವ ಸ್ಫೂರ್ತಿ ಯುವ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ -4 ಖ್ಯಾತಿಯ ಕಲಾವಿದರಿಂದ ಕಾಮಿಡಿ ನೈಟ್ಸ್ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.