ಸವಣೂರು ಕೆ. ಸೀತಾರಾಮ ರೈಯವರ ಆದರ್ಶ ಸಹಕಾರ ಸಂಘದಿಂದ ವಿದ್ಯಾನಿಧಿ ಸಹಾಯಧನ ವಿತರಣೆ

0


ಪುತ್ತೂರಿನ ದರ್ಜೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಿಂದ ವಿದ್ಯಾನಿಧಿ – ಸಹಾಯಧನ ವಿತರಣಾ ಸಮಾರಂಭ ಸೆ. 9ರಂದು ಸಂಘದ ವಾರ್ಷಿಕ ಮಹಾಸಭೆಯ ಬಳಿಕ ಮಧ್ಯಾಹ್ನ ನಡೆಯಿತು.


ಕಾರ್ಯಕ್ರಮವನ್ನು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಎಂ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರೋಟರಿ ಡಿಸ್ಟ್ರಿಕ್ಟ್ 3181ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಮತ್ತು ವೇದಿಕೆಯಲ್ಲಿದ್ದ ಅತಿಥಿಗಳು ಸಹಾಯಧನವನ್ನು ವಿತರಿಸಿದರು. ಸಹಕಾರ ಸಂಘಗಳ ಪುತ್ತೂರು ಉಪವಿಭಾಗ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು ಮತ್ತು ಸಂಘದ ಮಹಾಪ್ರಬಂಧಕರಾದ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಪ್ರಧಾನ ಕಚೇರಿ ವ್ಯವಸ್ಥಾಪಕರಾದ ಸುನಾದ್ ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ವಂದಿಸಿದರು.

ಸಂಘದ ಲಾಭಾಂಶದಲ್ಲಿ‌ ಸರಕಾರಿ ಶಾಲಾ‌ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೇವೆ. ಈ ಬಾರಿ 225 ವಿದ್ಯಾರ್ಥಿಗಳಿಗೆ ತಲಾ ರೂ. 2000 ದಂತೆ ನೀಡಲಿದ್ದೇವೆ – ಸವಣೂರು ಕೆ. ಸೀತಾರಾಮ ರೈ

ಸೀತಾರಾಮ ರೈಯವರು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿರುವುದು ಶ್ಲಾಘನೀಯ. ಸರಕಾರದ ಕಡೆಯಿಂದ ಇವರ ಸಂಸ್ಥೆಗಳಿಗೆ ನೀಡಬಹುದಾದ ಸಹಾಕಾರವನ್ನು ನೀಡುತ್ತೇವೆ – ಗಿರೀಶ್ ನಂದನ್

ಸಾಮಾನ್ಯವಾಗಿ ಸಹಕಾರಿ ಸಂಘಗಳು ಲಾಭ ಗಳಿಸಿದರೆ ಅಧ್ಯಕ್ಷರು, ನಿರ್ದೇಶಕರು ವಿದೇಶ ಪ್ರವಾಸವೋ, ಇನ್ನೇನೋ‌ ಮಾಡುತ್ತಾರೆ. ಆದರೆ
ಸೀತಾರಾಮ ರೈಯವರ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಹೃದಯ ವಿಶಾಲತೆ ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಒಂದೊಂದು ಅಂಕಗಳೂ ಪ್ರಾಮುಖ್ಯ. ಪ್ರಯತ್ನಪಟ್ಟರೆ ನಿಮ್ಮಿಂದ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ನಿಮ್ಮ ಸಾಧನೆ ಇರಲಿ. ಅಮ್ಮ ಜೀವ ಕೊಟ್ಟರೆ, ಅಪ್ಪ ಬದುಕಲು ದಾರಿ ತೋರಿಸುತ್ತಾನೆ. ಶಿಕ್ಷಕ ಜ್ಞಾನ ನೀಡಿದರೆ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಬೇಕು – ಕೆ.ಆರ್.ಜಿ.