ಸುಳ್ಯ ತಾಲೂಕು
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೆಳ್ಳಾರೆಯ ಪನ್ನೆಯ ಶ್ರೀ ಗಾಯತ್ರಿ ವಿಶ್ವಕರ್ಮ ಸಭಾಭವನ 33ನೇ ವರ್ಷದ ಕನ್ಯಾಸಂಕ್ರಮಣದ ಶ್ರೀ ವಿಶ್ವಕರ್ಮ ಪೂಜೆ ಸೆ. 17ರಂದು ನಡೆಯಲಿದೆ. ಪೂರ್ವಾಹ್ನ ಗಂಟೆ 8-30ಕ್ಕೆ – ಧ್ವಜಾರೋಹಣ, 9-30ರಿಂದ
ಶ್ರೀ ವಿಶ್ವಕರ್ಮ ಪೂಜೆ ನಡೆಯಲಿದೆ. ಪೂಜೆ ಮಾಡಿಸುವವರು ರೂ. 200-00 ಕೊಟ್ಟು ಪೂಜೆಯನ್ನು ಮಾಡಿಸಬಹುದಾಗಿದೆ. 2021-22ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿರುವುದರಿಂದ ಅರ್ಹ ವಿದ್ಯಾರ್ಥಿಗಳಿಗಳು ತಮ್ಮ ಅಂಕಪಟ್ಟಿಯ
ಜೆರಾಕ್ಸ್ ಪ್ರತಿಯನ್ನು ಸೆ. 15ರ ಒಳಗೆ ಸಿ.ಹೆಚ್, ಸೋಮಶೇಖರ ಬೆಳ್ಳಾರೆ, ಅಧ್ಯಕ್ಷರು ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಪನ್ನೆ ಬೆಳ್ಳಾರೆ ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ವಿನಂತಿಸಿದ್ದಾರೆ, ಆಮಂತ್ರಣ ತಲುಪದಿರುವ ಸಮಾಜ ಬಾಂಧವರು ಮಾದ್ಯಮ ಪ್ರಕಟಣೆಯನ್ನೇ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ ಆಗಮಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಯವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.