ದುಗ್ಗಲಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮ

0

ರಂಜಿಸಿದ ಪುಟಾಣಿಗಳ ಶ್ರೀಕೃಷ್ಣ ವೇಷ ಸ್ಪರ್ಧೆ- ಕ್ರೀಡಾಕೂಟ

ಸುಸಂಸ್ಕೃತ ಜೀವನ ಪದ್ಧತಿಯೇ ಧರ್ಮ: ಲಕ್ಷ್ಮೀಶ ಗಬ್ಬಲಡ್ಕ

ದುಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗಲಡ್ಕ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಸೆ.೧೦ರಂದು ದುಗಲಡ್ಕದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಿತು.


ಪ್ರಗತಿಪರ ಕೃಷಿಕರಾದ ಜಯರಾಮ ಗೌಡ ಪಾನತ್ತಿಲರವರು ಶ್ರೀಕೃಷ್ಣ ದೇವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುರಲ್ ತುಳುಕೂಟದ ಪೂರ್ವಾಧ್ಯಕ್ಷ, ಯಕ್ಷಗುರು ಬಾಲಕೃಷ್ಣ ನಾಯರ್ ನೀರಬಿದಿರೆ, ಪ್ರೌಢಶಾಲಾ ಸಹಶಿಕ್ಷಕ ಉನ್ನಿಕೃಷ್ಣನ್ ಭಾಗವಹಿಸಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಚೇತನ್ ಕಲ್ಮಡ್ಕ ವಹಿಸಿದ್ದರು. ವೇದಿಕೆಯಲ್ಲಿ ಜಂಟಿ ಸಂಘಗಳ ಸಂಚಾಲಕ ಡಾ.ಕೆ.ಟಿ. ವಿಶ್ವನಾಥ್, ಮಾಜಿ ನ.ಪಂ. ಸದಸ್ಯ ಇಬ್ರಾಹಿಂ ನೀರಬಿದಿರೆ, ಕುರಲ್ ತುಳುಕೂಟದ ಗೌರವಾಧ್ಯಕ್ಷ ನಾರಾಯಣ ಟೈಲರ್, ಕೋಶಾಧಿಕಾರಿ ಶೇಖರ ಕುದ್ಪಾಜೆ, ಯುವಕ ಮಂಡಲದ ಗೌರವಾಧ್ಯಕ್ಷ ದಿನೇಶ್ ಕೊಯಿಕುಳಿ, ಕಾರ್ಯದರ್ಶಿ ಪ್ರದೀಪ್ ಮೂಡೆಕಲ್ಲು, ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ಉಪಸ್ಥಿತರಿದ್ದರು.


ತುಳುಕೂಟದ ಕಾರ್ಯದರ್ಶಿ ಮನೋಜ್ ಪಾನತ್ತಿಲ ಸ್ವಾಗತಿಸಿ, ಯುವಕ ಮಂಡಲದ ಪೂರ್ವಾಧ್ಯಕ್ಷ ಭವಾನಿಶಂಕರ ಕಲ್ಮಡ್ಕ ವಂದಿಸಿದರು. ತುಳುಕೂಟದ ಅಧ್ಯಕ್ಷೆ ನವ್ಯಾ ದಿನೇಶ್ ಕೊಯಿಕುಳಿ ಕಾರ್ಯಕ್ರಮ ನಿರೂಪಿಸಿದರು.


ಧಾರ್ಮಿಕ ಸಭಾ ಕಾರ್ಯಕ್ರಮ:

ಅಪರಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಚಿಂತಕರಾದ ಲಕ್ಷ್ಮೀಶ ಗಬ್ಬಲಡ್ಕ ಧಾರ್ಮಿಕ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಸುಸಂಸ್ಕೃತ ಜೀವನ ಪದ್ಧತಿಯೇ ಧರ್ಮ. ಆಚಾರ, ವಿಚಾರಗಳನ್ನು ತಿಳಿದು ಜೀವನ ನಡೆಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಡಪ್ಪಾಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸದಾನಂದ ಮಾವಜಿ, ಮಂಗಳೂರಿನ ಹೋಂ ಎಲೆಕ್ಟ್ರಾನಿಕ್ಸ್‌ನ ಮಾಲಕರಾದ ರಜತ್ ಆರ್. ಕಾಮತ್ ಮತ್ತು ಉಮೇಶ್ ಕಾಮತ್, ಸಮಾಜರತ್ನ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಮೇಸ್ತ್ರಿ ಬಳ್ಳಾರಿ, ಹಾಲು ಸೊಸೈಟಿ ಮಾಜಿ ಅಧ್ಯಕ್ಷೆ ವಾರಿಜಾ ಕೊರಗಪ್ಪ ಗೌಡ, ಮಾಜಿ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಉಪಸ್ಥಿತರಿದ್ದು, ಮಾತನಾಡಿದರು. ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಕೆ.ಟಿ.ವಿಶ್ವನಾಥ್ ಸ್ವಾಗತಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷೆ ನವ್ಯಾ ದಿನೇಶ್ ಕೊಯಿಕುಳಿ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.


ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಾಮಾಜಿಕ ಧುರೀಣ ರಘು, ದಾನಿಗಳಾದ ಅಶ್ವಿನ್ ನಡುಮುಟ್ಲು, ಭೋಜಪ್ಪ ನಾಯ್ಕ ವಿನೋಬಾನಗರ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಮಾಧವ ಗೌಡ ದುಗಲಡ್ಕ,ಕೃಷ್ಣಸ್ವಾಮಿ ಕಂದಡ್ಕ,ಸಂಚಾಲಕ ಕೆ.ಟಿ. ವಿಶ್ವನಾಥ್,ಅಧ್ಯಕ್ಷ ಚೇತನ್ ಕಲ್ಮಡ್ಕ ಉಪಸ್ಥಿತರಿದ್ದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಕೆ.ಎನ್. ಸ್ವಾಗತಿಸಿ, ಸುದ್ದಿ ವರದಿಗಾರ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಬೆಳಿಗ್ಗಿನಿಂದ ಸಂಜೆಯವರೆಗೆ ಪುಟಾಣಿಗಳಿಗೆ ಶ್ರೀಕೃಷ್ಣ ವೇಷ ಸ್ಫರ್ಧೆ, ಮಕ್ಕಳಿಗೆ ಪುರುಷರಿಗೆ, ಮಹಿಳೆಯರಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಮಹಿಳೆಯರ ಮತ್ತು ಪುರುಷರ ವಿಭಾಗದ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.