ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಕಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕೇಂದ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ಪ್ರಾಥಮಿಕ ಶಾಲಾ ವಿಭಾಗದ ಪಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24 ಸೆ.12 ರಂದು ಪಂಜ ಸ.ಮಾ.ಹಿ.ಪ್ರ.ಶಾಲೆಯಲ್ಲಿ ಉದ್ಘಾಟನೆ ಗೊಂಡಿತು.
ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ರವರು ಉದ್ಘಾಟಿಸಿ ಮಾತನಾಡಿ” ಪಠ್ಯ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಮತ್ತು ಪ್ರತಿಭೆಗಳ ಬೆಳವಣಿಗೆಗೆ ಪ್ರತಿಭಾ ಕಾರಂಜಿ ವೇದಿಕೆ ಕಾರಣವಾಗುತ್ತದೆ.” ಎಂದು ಶುಭಹಾರೈಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ನೇರಳ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಚಂದ್ರಶೇಖರ ದೇರಾಜೆ, ಶ್ರೀಮತಿ ಮಲ್ಲಿಕಾ, ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ, ಸಿ.ಆರ್.ಪಿ ಜಯಂತ ಕೆ,ಸುಳ್ಯ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರೋಜಿನಿ ಕೆಮ್ಮೂರು, ಕಡಬ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿ ಶ್ರೀಮತಿ ಅಂಬಿಕಾ ,ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ಸ್ವಾಗತಿಸಿದರು.ಸಿ.ಆರ್.ಪಿ ಜಯಂತ ಕೆ ಪ್ರಾಸ್ತಾವಿಕಗೈದರು. ಗೌ.ಶಿಕ್ಷಕ ಹರೀಶ್ ಕಜೆ ಮತ್ತು ಶಿಕ್ಷಕಿ ಶ್ರೀಮತಿ ಮಂಜುಳಾ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಗುಲಾಬಿ ವಂದಿಸಿದರು.