ಗೃಹಜ್ಯೋತಿ, ಶಕ್ತಿ ಯೋಜನೆಗೂ ಉತ್ತಮ ಪ್ರತಿಕ್ರಿಯೆ : ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾಹಿತಿ
ರಾಜ್ಯ ಸರಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲೂಕಿನಲ್ಲಿ ಒಟ್ಟು ಶೇ.79 ಗುರಿ ಸಾಧನೆಯಾಗಿದೆ. ಹಾಗೂ ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗೂ ಉತ್ತಮ ಪ್ರತಿಕ್ರಿಯೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸೆ.12 ರಂದು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಅಭಿಷೇಕ್ ರ ಅಧ್ಯಕ್ಷತೆಯಲ್ಲಿ ಸಭೆ ಮಡೆಯಿತು. ಇ.ಒ. ರಾಜಣ್ಣ, ತಹಶೀಲ್ದಾರ್ ಮಂಜುನಾಥ್ ಹಾಗೂ ಇಲಾಖಾಧಿಕಾರಿಗಳು ಸಭೆಯಲ್ಲಿ ಇದ್ದರು.
ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ಯವರು ರಾಜ್ಯ ಸರಕಾರದ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ನಗರ ಪ್ರದೇಶದಲ್ಲಿ ಶೇ.80 ಹಾಗೂ ಗ್ರಾಮೀಣ ಭಾಗದಲ್ಲಿ 73 ಶೇ. ತಾಲೂಕಿನಲ್ಲಿ ಒಟ್ಟು ಶೇ.79 ಗುರಿ ತಲುಪಲಾಗಿದೆ ಎಂದು ಸುಳ್ಯ ಸಿಡಿಪಿಒ ಶ್ರೀಮತಿ ಶೈಲಜಾ ಮಾಹಿತಿ ನೀಡಿ, ಆದರೆ ಅರ್ಜಿ ಹಾಕಿದವರಲ್ಲಿ ಕೆಲವರಿಗೆ ಇನ್ನೂ ಹಣ ಬಾರದಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಅದಕ್ಕೆ ಆಧಾರ್ ಲಿಂಕ್ ಇನ್ನಿತರ ಸಮಸ್ಯೆಯ ಕುರಿತು ಪರಿಶೀಲಿಸಿ, ಫಲಾನುಭವಿಗೆ ಮಾಹಿತಿ ನೀಡಿ. ಅಂಗನವಾಡಿ ಕಾರ್ಯಕರ್ತರ ಮೂಲಕ ಮಾಹಿತಿ ನೀಡಿ ಎಂದು ಆಡಳಿತಾಧಿಕಾರಿಗಳು ಸೂಚನೆ ನೀಡಿದರು.
ಗೃಹಜ್ಯೋತಿ ಕುರಿತು ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ಮಾಹಿತಿ ನೀಡಿ 18 ಸಾವಿರ ಫಲಾನುಭವಿಗಳು ಸವಲತ್ತು ಪಡೆಯುವ ಕುರಿತು ವಿವರ ನೀಡಿದರೆ, ಶಕ್ತಿಯೋಜನೆಯ ಕುರಿತು ಕೆಆರ್ ಟಿಸಿ ಮ್ಯಾನೇಜರ್ ವಾಸುದೇವರು ವಿವರ ನೀಡಿದರು. ಉತ್ತಮ ಪ್ರತಿಕ್ರಿಯೆ ಇದೆ. ಆದರೆಕೆಲವು ಭಾಗಕ್ಕೆ ಬಸ್ ಕೇಳುತ್ತಿದ್ದಾರೆ ಎಂಬ ಮಾಹಿತಿಯನ್ನೂ ಅವರು ನೀಡಿದರು.
ಕುಡಿಯುವ ನೀರು, ಪಯಸ್ವಿನಿ ಹೂಳೆತ್ತುವ, ಶಾಲೆಗಳ, ಅಕ್ಷರದಾ ಸೋಹ ಕೊಠಡಿ ದುರಸ್ತಿ ಹೀಗೆ
ಹಲವು ವಿಚಾರಗಳ ಕುರಿತುಸಭೆಯಲ್ಲಿ ಚರ್ಚೆಗಳು ನಡೆದವು.