ಸಂಪಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ದ.ಕ.ಸಂಪಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಇಂದು ಸಂಪಾಜೆ ಸಹಕಾರಿ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನಿರ್ದೇಶಕರು ವೇದಿಕೆ ಉಪಸ್ಥಿತರಿದ್ದರು. ಪಶುವೈದ್ಯಾಧಿಕಾರಿ ಡಾ.ಚೇತನ್, ಸೂಪರ್ ವೈಸರ್ ನಿರಂಜನ ಮಾತನಾಡಿದರು‌.


ಪ್ರಸಕ್ತ ಸಾಲಿನಲ್ಲಿ ಸಂಘವು ರೂ.204592.68 ಲಾಭಾಂಶ ಗಳಿಸಿದ್ದು, ಹಾಲು ಉತ್ಪಾದಕರಿಗೆ 65%, ಡಿವಿಡೆಂಡ್ 15%, ಸಿಬ್ಬಂದಿ ಬೋನಸ್ ಒಂದೂವರೆ ತಿಂಗಳ ಸಂಬಳ ನೀಡುವುದೆಂದು ಸಭೆಯಲ್ಲಿ ಘೋಷಣೆ ಮಾಡಲಾಯಿತು. ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.