ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಹಾಗೂ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಉದ್ಘಾಟನೆ ಹಾಗೂ ಜ್ಞಾನದೀಪ ಶಾಲಾ ವೆಬ್ ಸೈಟ್ ಅನಾವರಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನದೀಪ ಶಾಲಾ ಅಧ್ಯಕ್ಷರಾದ ಚಂದ್ರಶೇಖರ್ ಭಟ್ ತಳೂರು ವಹಿಸಿದ್ದರು.
ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಎಂ.ಜಿ.ಎಂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸುಳ್ಯ ಇದರ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ನೆರವೇರಿಸಿದರು. ವೆಬ್ ಸೈಟ್ ಉದ್ಘಾಟನೆಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವೆಂಕಟ್ರಮಣ ರಾವ್ ಮಂಕುಡೆ ನೆರವೇರಿಸಿ ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾ ಭಾರತಿಯ ಕ್ರೀಡಾ ಸಂಯೋಜಕರಾದ ಕರುಣಾಕರ ಶಾಲಾ ಸಂಚಾಲಕರಾದ ಎ. ವಿ. ತೀರ್ಥರಾಮ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಇಂದಿರೇಶ ಗುಡ್ಡೆ, ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಜಿಲ್ಲೆಯ 42 ತಂಡಗಳು ಭಾಗವಹಿಸಿದ್ದವು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಸಂಸ್ಥೆ ಉಪ್ಪಿನಂಗಡಿ ಪ್ರಥಮ, ರಾಜ್ ಅಕಾಡೆಮಿ ಗಂಜಿಮಠ ದ್ವಿತೀಯ, ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾ ಸಂಸ್ಥೆ ಉಪ್ಪಿನಂಗಡಿ ಪ್ರಥಮ, ಶುಭೋದಯ ವಿದ್ಯಾಲಯ, ವಾಮಂಜೂರ್ ದ್ವಿತೀಯ, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ಉಪ್ಪಿನಂಗಡಿ ಪ್ರಥಮ ಶುಭೋದಯ ವಿದ್ಯಾಸಂಸ್ಥೆ ವಾಮಂಜೂರ್ ದ್ವಿತೀಯ, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಇಂದ್ರಪ್ರಸ್ಥ ಉಪ್ಪಿನಂಗಡಿ ಪ್ರಥಮ, ಶುಭೋದಯ ವಿದ್ಯಾಲಯ ವಾಮನೂರು ದ್ವಿತೀಯ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಪ್ರಥಮ, ಶಾರದ ಪಿಯು ಕಾಲೇಜ್ ಮಂಗಳೂರು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಪ್ರಥಮ, ಶಾರದಾ ವಿದ್ಯಾಲಯ ಮಂಗಳೂರು ದ್ವಿತೀಯ ಸ್ಥಾನ ಪಡೆದವು. ಎಲ್ಲಾ ವಿಭಾಗಗಳ ಪಂದ್ಯಾಟಗಳು ಉತ್ತಮವಾಗಿ ಮೂಡಿ ಬಂದವು.