ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ – ಬೊಳ್ಳಾಜೆ ಕಾಂಕ್ರೀಟ್ ರಸ್ತೆ ಇಂದು ಉದ್ಘಾಟನೆಗೊಂಡಿತು.
ಶ್ರೀ ಶಾರದಾ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಅನಂತ ಭಟ್ ಕನಿಯಾಲ ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೊಳ್ಳಾಜೆ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ಯಾಮಾಲ ಎ.ವಿ., ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಸತ್ಯೇಶ್ ಚಂದ್ರೋಡಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ಸದಸ್ಯರಾದ ವನಿತಾ ಬೊಳ್ಳಾಜೆ, ಭಾಗೀರಥಿ ಎರ್ಮೆಟ್ಟಿ, ನಿವೃತ್ತ ಅಂಚೆ ಪಾಲಕ ಬಾಲು ನಾಯ್ಕ ಕೊರತ್ತೋಡಿ, ಶ್ರೀ ಚಾಮುಂಡೇಶ್ವರಿ ಭಜನಾ ಸಂಘದ ಸ್ಥಾಪಕಾಧ್ಯಕ್ಷ ಗಂಗಾಧರ ಕೊರತ್ತೋಡಿ, ಸ್ಥಳೀಯರಾದ ಗಂಗಾಧರ ಬೊಳ್ಳಾಜೆ, ಅಶೋಕ ಕಿಲಾರ್ಕಜೆ, ಜ್ಯೋತಿ ಕೊರತ್ತೋಡಿ, ಅಕ್ಷತಾ ಕೊರತ್ತೋಡಿ, ರಾಘವೇಂದ್ರ ಕಂದೂರು, ನಾರಾಯಣ ಬೊಳ್ಳಾಜೆ, ಕೃಷ್ಣ ಮಣಿಯಾಣಿ ಬೊಳ್ಳಾಜೆ, ಶ್ರೀಧರ ಮಣಿಯಾಣಿ ಬೊಳ್ಳಾಜೆ ಮತ್ತಿತರರಿದ್ದರು. ದಯಾನಂದ ಕೊರತ್ತೋಡಿ ಸ್ವಾಗತಿಸಿದರು. ಪಂ.ಸದಸ್ಯ ವೇಣುಗೋಪಾಲ ತುಂಬೆತ್ತಡ್ಕ ವಂದಿಸಿದರು. ಚರಣ್ ಕೊರತ್ತೋಡಿ ಸಹಕರಿಸಿದರು.