ಬಳ್ಪ ಗ್ರಾಮ ಪಂಚಾಯತ್ ಜಮಾಬಂಧಿ

0


ಬಳ್ಪ ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ವಾರ್ಷಿಕ ಜಮಾಬಂಧಿ ಸೆ. 13ರಂದು ನಡೆಯಿತು.
ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಪ್ರಮೋದ್ ಕುಮಾರ್ ಕೆ.ಕೆ ಜಮಾಬಂಧಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಉಪಾಧ್ಯಕ್ಷೆ ಪಾರ್ವತಿ ಪಿ.ಡಿ, ಸದಸ್ಯರಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಚಂದ್ರಶೇಖರ ಅಕ್ಕೇಣಿ, ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ಸುನೀತಾ ಸಂಪ್ಯಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ ,ಮಾಜಿ‌ ಅಧ್ಯಕ್ಷೆ, ಹಾಲಿ ಸದಸ್ಯೆ ಶ್ರೀಮತಿ ಶಶಿಕಲಾ ಸೂಂತಾರು ಮತ್ತು ಪಂಚಾಯತ್ ಸಿಬ್ಬಂದಿ ವರ್ಗ, ಲೋಕೋಪಯೋಗಿ ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಸುಬ್ರಹ್ಮಣ್ಯ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಘು ಎನ್. ಬಿ. ಸ್ವಾಗತಿಸಿ ವಂದಿಸಿದರು.