ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಸೆ. 13ರಂದು ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕಿಯರ ತಂಡವು ಫೈನಲ್ ಪಂದ್ಯದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡವನ್ನು ಮಣಿಸುವುದರೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಯುಕ್ತಿ.ಕೆ, ದೇವಿಕಾ.ಕೆ, ಯಾಶಿಕ.ಯಂ.ಆರ್, ಐಶ್ವರ್ಯ.ಕೆ, ದೀಪಿಕಾ.ಹೆಚ್.ಪಿ, ಯಶಸ್ವಿ.ಕಾವ್ಯಶ್ರೀ.ಕೆ.ಕೆ, ಕಾವ್ಯಶ್ರೀ.ಎಸ್.ಕೆ, ಲಕ್ಷ್ಮಿ.ಕೆ,ಕೌಶಿತಾ,ಅಶಿಕಾ.ಯಂ,ವಕ್ಷಿತಾ ಭಾಗವಹಿಸಿದರು.
ಯುಕ್ತಿ.ಕೆ ಸರ್ವಾಂಗೀಣ ಆಟಗಾರ್ತಿ ಹಾಗೂ ಯಶಸ್ವಿ ಉತ್ತಮ ಹೊಡೆತಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು ಹಾಗೂ ಬಾಲಕರ ತಂಡವು ನೆಹರು ಮೆಮೋರಿಯಲ್ ಪಿ.ಯು ಕಾಲೇಜು ವಿರುದ್ಧ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ತಂಡದಲ್ಲಿ ಓಂಪ್ರಸಾದ್,ರವಿ.ಕೆ,ರಂಜಿತ್, ರೋಶನ್.ಕೆ.ನೀತೆಸ್.ಅದಿತ್ಯ.ಕೆ, ಗಗನ್,ದುಶ್ಯತ್.ಯಂ, ಪುನೀತ್.ಐ.ಎಸ್, ಕಾರ್ತಿಕ್.ಕೆ.ಎಂ, ವಿನೀತ್.ಕುಶನ್,ಯತಿನ್.ಬಿ ಭಾಗವಹಿಸಿದರು. ಆದಿತ್ಯ.ಕೆ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಏನೆಕಲ್ಲು ತರಬೇತಿ ನೀಡಿರುತ್ತಾರೆ. ತಂಡದ ನಿರ್ದೇಶಕರಾಗಿ ಪ್ರಾಂಶುಪಾಲರಾದ ಚೆನ್ನಮ್ಮ ಪಿ. ಹಾಗೂ ಎಲ್ಲಾ ಉಪನ್ಯಾಸಕ ವೃಂದ ತಂಡ ಸಂಯೋಜನೆಗೆ ಸಹಕರಿಸಿರುತ್ತಾರೆ.