ಮಂಡೆಕೋಲಿನಲ್ಲಿ ರೇಬಿಸ್ ರೋಗ ಲಸಿಕೆ ಅಭಿಯಾನ

0

ಮಂಡೆಕೋಲು ಗ್ರಾಮ ಪಂಚಾಯತ್ ಹಾಗೂ ಸುಳ್ಯ ಪಶುಸಂಗೋಪನೆ ಇಲಾಖೆಯ ನೇತೃತ್ವದಲ್ಲಿ ನಾಯಿಗಳಿಗೆ ರೇಬಿಸ್ ರೋಗ ಲಸಿಕೆ ಅಭಿಯಾನ ಸೆ.15 ರಂದು ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ‌ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಭಟ್, ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಪಿಡಿಒ ರಮೇಶ್ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಇದ್ದರು.