ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕವಯಿತ್ರಿ ವಿಮಲಾರುಣ ಪಡ್ಡಂಬೈಲ್ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ

0

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಜರುಗಿದ ಚಂದನ ಕವಿಗೋಷ್ಠಿ ಸಾಹಿತ್ಯ ಸಮಾರಂಭದಲ್ಲಿ ಸುಳ್ಯದ ಕವಯತ್ರಿ ವಿಮಲಾರುಣ ಪಡ್ಡಂಬೈಲ್ ಅವರಿಗೆ ಅವರ ಸಾಹಿತ್ಯ ಸಾಧನೆ ಗುರುತಿಸಿ 2023 ನೇ ಸಾಲಿನ ಚಂದನ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರು, ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಮತ್ತು ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಟರ್, ಖ್ಯಾತ ಹಿರಿಯ ಸಾಹಿತಿ ಪುತ್ತೂರಿನ ಗೋಪಾಲ ಕೃಷ್ಣ ಭಟ್ ಮನವಳಿಕೆ, ಖ್ಯಾತ ಕವಯಿತ್ರಿ ಚಂದ್ರವತಿ ಬಡ್ಡಡ್ಕ, ನವೀನ್ ಚಾತುಬಾಯಿ, ಮಂಜುನಾಥ್ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕಾರ್ಯಕರ್ತ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ಇನ್ನಿತರರು ಉಪಸ್ಥಿತರಿದ್ದರು.