ಪುಟ್ಟ ಮಗುವಿನೊಂದಿಗೆ ಉಮ್ಮಿಂಗ್ ಲಾ ಕ್ಕೆ ತೆರಳಿ ತವರೂರಿಗೆ ಮರಳಿದ ದಂಪತಿ

0


ಸುಳ್ಯದಲ್ಲಿ ಸ್ವಾಗತ

ಜಮ್ಮು ಕಾಶ್ಮೀರದ ಲಡಾಖ್ ಮತ್ತು ವಿಶ್ವದ ಅತಿ ಎತ್ತರದ ಉಮ್ಮಿಂಗ್ ಲಾ ತೆರಳಿ ದಾಖಲೆ ನಿರ್ಮಿಸಿ ಪುಟ್ಟ ಮಗುವಿನೊಂದಿಗೆ ಸುಳ್ಯಕ್ಕೆ ಮರಳಿದ ದಂಪತಿಗಳಿಗೆ ಸುಳ್ಯ ಹಳೇಗೆಟಿನಲ್ಲಿ ಅವರನ್ನು ಸ್ವಾಗತಿಸಿ ಅಭಿನಂದಿಸಿದರು.

ಇತ್ತೀಚಿನ ದಿನಗಳಲ್ಲಿ ಲಡಾಖ್ ಮತ್ತು ಉಮ್ಮಿಂಗ್ ಲಾ ಕ್ಕೆ ಬೈಕ್ ಗಳಲ್ಲಿ,ಸೈಕಲ್ ಗಳಲ್ಲಿ, ಹಲವಾರು ಯುವಕರು ಯುವತಿಯರು ತೆರಳುತ್ತಾರೆ. ಅದರೆಡೆಯಲ್ಲಿ ಸುಳ್ಯದ ದಂಪತಿಗಳು ತನ್ನ ಮೂರು ವರ್ಷ ಪ್ರಾಯದ ಪುಟ್ಟ ಮಗುವಿನೊಂದಿಗೆ ಲಡಾಖ್ ವಿಶ್ವ ಅತಿ ಎತ್ತರದ ಉಮ್ಮಿಂಗ್ ಲಾ ಕ್ಕೆ ತೆರಳಿ ದಾಖಲೆ ನಿರ್ಮಿಸಿದ್ದಾರೆ.
ಸುಳ್ಯದ ಯುವ ಉದ್ಯಮಿ ಹಳೇಗೆಟಿನಲ್ಲಿರುವ ಹೋಮ್ ಗ್ಯಾಲರಿ ಮಾಲಕ ತೌಹೀದ್ ರೆಹ್ಮಾನ್ ಮತ್ತು ಅವರ ಪತ್ನಿ ಜಸ್ನೀಯಾ ಹಾಗೂ ಪುಟ್ಟ ಮಗ ಜಸೀಲ್ ರಹ್ಮಾನ್ ಆಗಸ್ಟ್ ೧೫ ರಂದು ಸುಳ್ಯದಿಂದ ತೆರಳಿ ಸೆಪ್ಟೆಂಬರ್ ೧೫ಕ್ಕೆ ಸುಳ್ಯಕ್ಕೆ ವಾಪಸ್ಸಾದರು.