ಕುಕ್ಕುಜಡ್ಕ :ಪೌಷ್ಟಿಕಾಹಾರ ಮಾಸಾಚರಣೆ ಕಾರ್ಯಕ್ರಮ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾಮ ಪಂಚಾಯತ್ ಅಮರ ಮುಡ್ನೂರು ,ಅಕ್ಷಯ ಸ್ತ್ರೀ ಶಕ್ತಿ ಗೊಂಚಲು ಅಮರಮುಡ್ನೂರು ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಕುಕ್ಕುಜಡ್ಕ ದ ಕೊರಗ ಭವನದಲ್ಲಿ ಗೊಂಚಲಿನ ಅದ್ಯಕ್ಷರಾದ ಶ್ರೀಮತಿ ಸುಮರವರ ಅದ್ಯಕ್ಷ ತೆಯಲ್ಲಿ ಪೌಷ್ಟಿಕಾಹಾರ ಮಾಸಾಚರಣೆ ಕಾರ್ಯಕ್ರಮ ಸೆ.4ರಂದು ಆಚರಿಸಲಾಯಿತು.

ಇಲಾಖೆಯ ವಲಯ ಮೇಲ್ವಿಚಾರಕಿ ಶ್ರೀಮತಿ ವಿಜಯ ರವರು ಕಾರ್ಯಕ್ರಮ ಉದ್ಘಾಟಿಸಿ ಪೌಷ್ಟಿಕಾಹಾರದ ಪ್ರಾಮುಖ್ಯತೆ ಹಾಗೂ ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿದರು. ಶ್ರೀಮತಿ ಚಂದ್ರಾವತಿ ಪೈಲಾರು ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ನಿರ್ಮಲಾ ರೈ ಪ್ರಾರ್ಥಿಸಿದರು.

ಗೊಂಚಲು ಸಮಿತಿಯ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಶಿಕ್ಷಕಿಯರು, ಗುಂಪಿನ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದು ಪೌಷ್ಟಿಕಾಹಾರ ಸ್ಪರ್ಧೆ, ಪ್ರಾತ್ಯಕ್ಷಿತೆ ಕಾರ್ಯಕ್ರಮಗಳನ್ನು ನಡೆಸಲಾಯಿತು.