ಜಾಗದ ಮೂಲ ದಾಖಲೆಯನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಪಿಗ್ಮಿ ಕಲೆಕ್ಟರ್

0

ಸಾಲ ಮಾಡಲು ಸೊಸೈಟಿಯಲ್ಲಿ ವಿಚಾರಿಸಲು ತನ್ನ ಅಜ್ಜನ ಹೆಸರಿನ ಜಾಗದ ಮೂಲ ದಾಖಲೆ ಸಮೇತ ಬಂದಿದ್ದ ಯುವಕನೊಬ್ಬ ತನ್ನ ದಾಖಲೆಗಳನ್ನು ಕಳೆದುಕೊಂಡು, ಅದು ಪಿಗ್ಮಿ ಸಂಗ್ರಹಕರೊಬ್ಬರಿಗೆ ಸಿಕ್ಕಿ ಅದನ್ನು ಅವರಿಗೆ ಪ್ರಾಮಾಣಿಕವಾಗಿ ಮರಳಿಸಿದ ಘಟನೆ ಸೆ. 15 ರಂದು ನಡೆಯಿತು.

ಏನೆಕಲ್ಲು ಗ್ರಾಮದ ಜೀವನ್ ಚಳ್ಳಂಗಾರು ಎಂಬ ಯುವಕ ಸುಳ್ಯದ ವೆಂಕಟರಮಣ ಸೊಸೈಟಿಯಲ್ಲಿ ಸಾಲ ಮಾಡಲೆಂದು ತನ್ನ ಜಾಮೀನಿನ ಮೂಲ ದಾಖಲೆಯನ್ನು ವಿಚಾರಣೆಗಾಗಿ ಸೊಸೈಟಿಗೆ ತಂದಿದ್ದರು. ಅದು ಅವರ ಅಜ್ಜನ ಹೆಸರಿನಲ್ಲಿದ್ದು ವೆಂಕಪ್ಪ ಚಳ್ಳಂಗಾರು ಎಂಬ ಹೆಸರಿನಲ್ಲಿತ್ತು. ಸೊಸೈಟಿಯಲ್ಲಿ ಸಾಲದ ಬಗ್ಗೆ ವಿಚಾರಣೆ ಮುಗಿದ ನಂತರ ಅವರು ತನ್ನ ಮನೆಯತ್ತ ಹೊರಟರು.

ಸ್ವಲ್ಪ ಸಮಯದ ನಂತರ ಅದೇ ದಾರಿಯಲ್ಲಿ ಬಂದ ವೆಂಕಟರಮಣ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಪುರುಷೋತ್ತಮ ಪೇರಾಲು ಎಂಬವರಿಗೆ ನಡು ರಸ್ತೆಯಲ್ಲಿ ಈ ದಾಖಲೆ ಸಿಕ್ಕಿದ್ದು, ಅದರಲ್ಲಿರುವ ಫೋನ್ ನಂಬರ್ ಮೂಲಕ ಸಂಪರ್ಕಿಸಿ ದಾಖಲೆ ಕಳೆದುಕೊಂಡ ಜೀವನ್ ಅವರಿಗೆ ವಿಷಯ ತಿಳಿಸಿದರು.

ಇಬ್ಬರು ಸುದ್ದಿ ಕಚೇರಿಗೆ ಆಗಮಿಸಿ, ಮೂಲ ದಾಖಲೆಯನ್ನು ಪುರುಷೋತ್ತಮ ಗೌಡರು ಜೀವನ ಚಳ್ಳಂಗಾರುರವರಿಗೆ ಹಸ್ತಾಂತರಿಸಿದರು.