ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

0


ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ ನೇ ಸಾಲಿನ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷ ಭರತ್ ನೆಕ್ರಾಜೆ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷ ಭರತ್ ನೆಕ್ರಾಜೆ ಅವರು ಮಾತನಾಡಿ ಸಂಘವು ೨.೫೬ ಲಕ್ಷ ರೂ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಪ್ರತಿ ಲೀಟರಿಗೆ ೦.೫೫ ಪೈಸೆ ಬೋನಸ್ ಹಾಗೂ ಶೇ ೧೨ ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.


ಕಾರ್‍ಯದರ್ಶಿ ಗೀತಾ.ಡಿ ವರದಿ ಮಂಡಿಸಿ ಸಂಘದ ವರದಿ ಸಾಲಿನಲ್ಲಿ ೩೬೧ ಸದಸ್ಯರಿದ್ದು ಇದರಲ್ಲಿ ಸರಸಾರಿ ೧೧೦ ಜನ ಹಾಲು ಹಾಕುತ್ತಿದ್ದಾರೆ. ಹಾಲು ವ್ಯಾಪಾರ, ಪಶು ಆಹಾರ ವ್ಯಾಪರ, ಇತರ ಆದಾಯ ಸೇರಿ ಒಟ್ಟು ೮.೩೫ ಲಕ್ಷ ರೂ ಲಾಭಗಳಿಸಿದ್ದು, ಖರ್ಚು ಕಳೆದು ೨.೫೬ ಲಕ್ಷ ರೂ ನಿವ್ವಳ ಲಾಭಗಳಿಸಿದೆ. ಸಂಘಕ್ಕೆ ಅತೀ ಹೆಚ್ಚು ಮತ್ತು ಉತ್ತಮ ಗುಣ ಮಟ್ಟದ ಹಾಲು ಪೂರೈಕೆಮಾಡಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ಡಾ.ಸಚಿನ್ ಅವರು ಜಾನುವಾರು ನಿರ್ವಹಣೆ ಮತ್ತು ಚರ್ಮಗಂಟು ರೋಗಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ವಿಸ್ತರಣಾಧಿಕಾರಿ ಹರೀಶ್ ಅವರು ಕರು ಸಾಕಣಿಕೆ, ಮಿನಿ ಡೈರಿ, ಹೆಚ್ಚು ಹಾಲು ಪೂರೈಕೆ, ಒಕ್ಕೂಟದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಾದ ಆಶೋಕ್ ಅಂಬೆಕಲ್ಲು ಪ್ರಾರ್ಥಿಸಿದರು, ನಿರ್ದೇಶಕ ಶಿವಪ್ರಸಾದ ಮಾದನಮನೆ ಸ್ವಾಗತಿಸಿದರು. ನಿರ್ದೇಶಕ ರಾಮಣ್ಣ ಗೌಡ ಬೂದಿಪಳ್ಳ ವಂದಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುರೇಶ್ ಬಿ, ನಿರ್ದೇಶಕರಾದ ಗಂಗಾಧರ ಪಿ, ದಿನೇಶ್ ಕೆ, ಗಣೇಶ್ ಕೆ.ಎಸ್, ಲಕ್ಷ್ಮೀನಾರಾಯಣ ಯು, ಪರಮೇಶ್ವರ ಪರವ, ರಮೇಶ್ ನಾಯ್ಕ, ಶೀಲಾಕುಮಾರಿ, ದೇವಿಕೃಪಾ ಉಪಸ್ಥಿತರಿದ್ದರು.