ಸುಳ್ಯ ತಾಲೂಕು ಮೊಗೇರ ಸಂಘದ ಮಹಾಸಭೆ ಸೆ.3 ರಂದು ಪಂಜ ಪಂಚಲಿಂಗೇಶ್ವರ ದೇವಸ್ಥಾನ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ಕರುಣಾಕರ ಪಲ್ಲತಡ್ಕ ವಹಿಸಿ ” ಮುಂದಿನ ದಿನಗಳಲ್ಲಿ ಮೊಗೇರ ಸಮುದಾಯ ಯಾವುದೇ ಕಾರ್ಯಕ್ರಮ ಗಳಿಗೆ ಸಮುದಾಯದ ಜನರು ಸಹಾಯ ಹಸ್ತ ನೀಡಿ ಕಾರ್ಯಕ್ರಮ ಯಶಸ್ವಿ ಯಾಗುವಲ್ಲಿ ಸಹಕರಿಸಬೇಕು ಹಾಗೂ ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧದ ಧ್ವನಿ ಎತ್ತಬೇಕು” ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆಯನ್ನು ಮಾಜಿ ಸಚಿವ ಎಸ್.ಅಂಗಾರ ನೆರವೇರಿಸಿ, ” ಮೊಗೇರ ಸಂಘಟನೆ ಬಲ ಪಡಿಸುವಲ್ಲಿ ತಾವೆಲ್ಲರೂ ಒಗ್ಗಟ್ಟಾಗ ಬೇಕು. ಯುವಕ ಯುವತಿಯರು ವಿದ್ಯಾಭ್ಯಾಸ ದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನಿಕಟ ಪೂರ್ವಾಧ್ಯಕ್ಷ ಸುಂದರ ಮೇರರವರು ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರದಲ್ಲಿ ಮೊಗೇರ ರಿಗೆ ಆಗುತ್ತಿರುವ ಅನ್ಯಾಯ ದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ” ಮುಂದಿನ ಹೋರಾಟದಲ್ಲಿ ಸ್ವಜಾತಿ ಬಾಂಧವರು ಒಂದಾಗಿ ಹೋರಾಟ ನಡೆಸಿದಲ್ಲಿ ನ್ಯಾಯ ಸಿಗಬಹುದು” ಎಂದರು , ಮೊಗೇರ ಸಂಘ ಹಾಗೂ ಸಂಘಟನೆಯ ವಿಚಾರವನ್ನು ರಾಜ್ಯ ಮೊಗೇರ ಸಂಘದ ಉಪಾಧ್ಯಕ್ಷ ಸೀತಾರಾಮ್ ಕೊಂಚಾಡಿ ಪ್ರಸ್ತಾಪಿಸಿದರು.
ಮೊಗೇರ ಸಂಘಟನೆಯನ್ನು ಬಲಪಡಿಸುವ ಬಗ್ಗೆ ನಿವೃತ್ತ ಮುಖ್ಯಶಿಕ್ಷಕಿ ಕಮಲಾಕ್ಷಿ ಮಾತನಾಡಿದರು.
ಸಾಧಕರಿಗೆ ಸನ್ಮಾನ
ರಾಷ್ಟ್ರೀಯ ಅಂಬೇಡ್ಕರ್ ಅವಾರ್ಡ್ ಪುರಸ್ಕೃತರಾದ ಸೀತಾರಾಮ್ ಕೊಂಚಾಡಿ ಹಾಗೂ ರಾಷ್ಟ್ರೀಯ ಜ್ಯೋತಿ ಬಾಪುಲೆ ಅವಾರ್ಡ್ ಪುರಸ್ಕತರಾದ ನಂದರಾಜ್ ಸಂಕೇಶರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನೇಸರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು , ಮೊಗೇರ ಸಮುದಾಯದ ದುಡಿ ಕುಣಿತ ವಿಶೇಷ ಆಕರ್ಷಣೀಯವಾಗಿತ್ತು.
ರಕ್ಷಿತಾ ಎಂ.ಬಿ., ಬಾಳಪ್ಪ ಕೆ ಕಳಂಜ ಮೊಗೇರ ಸಂಘದ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಅಚ್ಚುತ ಮಲ್ಕಜೆ ಸಂಚಾಲಕರು ಮೊಗೇರ ಸಂಘ ಸುಳ್ಯ , ಖಜಾಂಚಿ ಹರೀಶ್ಚಂದ್ರ ಹಾಸನಡ್ಕ , ಗೌರವ ಸಲಹೆಗಾರ ಕೇಶವ ಮಾಸ್ತರ್ ಹೊಸಗದ್ದೆ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.