ಶೇ.8.25 ಲಾಭಾಂಶ ಘೋಷಣೆ, 414 ಕೋಟಿ ವ್ಯವಹಾರ
ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಹರಿಹರ ಪಲ್ಲತ್ತಡ್ಕ ಇದರ ವಾರ್ಷಿಕ ಮಹಾಸಭೆ ಸೆ.16ರಂದು ಶ್ರೀ ಮಯೂರ ಕಲಾ ಮಂದಿರ ಕೊಲ್ಲಮೊಗ್ರದಲ್ಲಿ ಇಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ಡಿ.ಎಸ್ ವಹಿಸಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಲಾಭಾಂಶ ವಿಂಗಡನೆಯನ್ನು ಓದಿ ಸಂಘವು 2022 – 2023ಸಾಲಿನಲ್ಲಿ 414 ಕೋಟಿಗೂ ಮಿಕ್ಕಿ ವ್ಯವಹಾರ ಗಳಿಸಿದೆ. ಪ್ರಸಕ್ತ ವರ್ಷ 7795984.32ಲಾಭಂಶ ಹೊಂದಿದ್ದು 8.25% ಡಿವಿಡೆಂಟ್ ವಿತರಿಸಲಿದೆ ಎಂದರು.
ಉಪಾಧ್ಯಕ್ಷರಾದ ಶೇಖರ ಅಂಬೆಕಲ್ಲು, ನಿರ್ದೇಶಕರುಗಳಾದ ಮಣಿಕಂಠ ಕೊಳಗೆ, ವಿನೂಪ್ ಮಲ್ಲಾರ, ತಾರಾನಾಥ ಮುಂಡಾಜೆ, ಗಿರೀಶ್ ಕಟ್ಟೆಮನೆ ಶ್ರೀಮತಿ ವಿಜಯ ಜಯರಾಮ ಕೂಜುಗೋಡು, ಶ್ರೀಮತಿವಿಜಯ ಶಿವರಾಮ ಕಜ್ಜೋಡಿ, ರಾಜೇಶ್ ಪರಮಲೆ, ಸುರೇಶ್ ಚಾಳೆಪ್ಪಾಡಿ,ಮೊನಪ್ಪ ಕೊಳಗೆ, ಬೊಳಿಯ ಬೆಂಡೋಡಿ, ಆಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು, ಶಾಖಾಧಿಕಾರಿ ಚಂದ್ರಶೇಖರ ಬಟ್ಟೋಡಿ ವೇದಿಕೆಯಲಿದ್ದರು.
ಅಪೂರ್ವ ಅಂಬೆಕಲ್ಲು ಪ್ರಾರ್ಥಿಸಿ, ಹರ್ಷಕುಮಾರ್ ಡಿ.ಎಸ್ ಸ್ವಾಗತಿಸಿದರು, ಚಂದ್ರಶೇಖರ ಬಟ್ಟೋಡಿ ದನ್ಯವಾದಗೈದರು. ಸಭೆಯಲ್ಲಿ ಗ್ರಾಮಕ್ಕೊಂದು ಪ್ರತ್ಯೇಕ ಸಹಕಾರಿ ಸಂಘ, ಡಿವಿಡೆಂಡ್ ಹೆಚ್ಚಳದ ವಿಷಯದ ಬಗ್ಗೆ, ಹರಿಹರ ಪಲ್ಲತಡ್ಕದಲ್ಲಿ ಸಂಘದ ವತಿಯಿಂದ ಪೆಟ್ರೋಲ್ ಬಂಕ್, 2024 ರಲ್ಲಿ ಸಂಘದ ಶತಮಾನೋತ್ಸವ ಮತ್ತಿತರರ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ವರದಿ: ಕುಶಾಲಪ್ಪ ಕಾಂತುಕುಮೇರಿ