ಪೆರುವಾಜೆ : ಗ್ರಾಮ ಸ್ನೇಹಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

0

ಗ್ರಾಮ ಸ್ನೇಹಿ ಸಂಜೀವಿನಿ ಗ್ರಾಮ ಪಂಚಾಯತು ಮಟ್ಟದ ಒಕ್ಕೂಟ ಪೆರುವಾಜೆ ಇದರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಯು ಪೆರುವಾಜೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಸೆ. 15 ರಂದು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಚಿತ್ರಕಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಗ್ರಾಮ ಪಂಚಾಯತು ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತಾಲೂಕು ಮೇಲ್ವಿಚಾರಕರಾದ ಮಹೇಶ್‌ , ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಶ್ರೀಮತಿ ಶಹೀನಾಜ್‌ , ಸದಸ್ಯರಾದ ಸಚಿನ್‌ ರಾಜ್‌ ಶೆಟ್ಟಿ , ಪದ್ಮನಾಭ ಶೆಟ್ಟಿ , ಶ್ರೀಮತಿ ಗುಲಾಬಿ, ಶ್ರೀಮತಿ ಚಂದ್ರಾವತಿ, ತಾಲೂಕು ಮ.ಗಾ.ಉ.ಖಾ.ಯೋಜನೆ ಐ.ಈ.ಸಿ ಸಂಯೋಜಕರಾದ ಕು. ನಮಿತಾ ಮತ್ತು ಮಾಜಿ ಅಧ್ಯಕ್ಷರಾದ ಶ್ರೀಮತಿ ಅನುಸೂಯ ಮತ್ತು ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮ ಸ್ನೇಹಿ ಸಂಜಿವಿನಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ವನಿತಾ, ಉಪಾಧ್ಯಕ್ಷರಾಗಿ ಪೂರ್ಣಿಮ, ಕಾರ್ಯದರ್ಶಿಯಾಗಿ ಸಿಸಿಲಿಯಾ, ಜತೆಕಾರ್ಯದರ್ಶಿಯಾಗಿ ಭವಾನಿ, ಕೋಶಾಧಿಕಾರಿಯಾಗಿ ಫಾತಿಮತ್ ಝೌರ ಇವರನ್ನು ಆಯ್ಕೆ ಮಾಡಲಾಯಿತು.