ಸುಳ್ಯ ನಗರದ ಕೇರ್ಪಳ ರಸ್ತೆಯಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಕಾಟದಿಂದ ಜನರಿಗೆ ತೊಂದರೆಯಾಗಿದೆ.
ದಾರಿಯಲ್ಲಿ ನಡೆದುಕೊಂಡು ಹೋಗುವ ವೃಧ್ದರಿಗೆ, ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೂ ಮತ್ತು ಜನ ಸಾಮಾನ್ಯರಿಗೆ ಭಯದ ವಾತಾವರಣ ಉಂಟಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ನ್ಯಾಯವಾದಿ ರಾಬಿಯಾ ಕೆ.ಎ.ತಿಳಿಸಿದ್ದಾರೆ.