ಉಬರಡ್ಕದಲ್ಲಿ 13ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಸಾಂಸ್ಕೃತಿಕ, ಸನ್ಮಾನ, ಸಭಾ ಕಾರ್ಯಕ್ರಮ

ಇಂದು ಶ್ರೀ ಗಣೇಶನ ವೈಭವದ ಶೋಭಾಯಾತ್ರೆ, ವಿಸರ್ಜನೆ

ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ 13 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಸೆ.20 ರಂದು ಗಣಪತಿ ಪ್ರತಿಷ್ಟೆ ಮಾಡುವುದರೊಂದಿಗೆ ಆರಂಭಗೊಂಡಿತು.

ಬೆಳಿಗ್ಗೆ ಭಜನೆ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ಅಪರಾಹ್ನ ಭಜನೆ, ರಾತ್ರಿ ರಿಂದ ಊರಿನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಾನ ನೃತ್ಯ ಅಕಾಡೆಮಿ ಸುಳ್ಯ ಮತ್ತು ಮಂಗಳೂರಿನ ಕಲಾವಿದೆಯರಿಂದ ನೃತ್ಯ ಸಂಗಮ ನಡೆಯಿತು.
ನಂತರ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ಯಾಮ್ ಪಾನತ್ತಿಲ ವಹಿಸಿದ್ದರು.
ಅಖಿಲಾ ಭಾರತೀಯ ವಿದ್ಯಾಸಂಸ್ಥಾನ ವಿದ್ಯಾ ಭಾರತಿ ಇದರ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ ಧಾರ್ಮಿಕ ಉಪನ್ಯಾಸ ಮಾಡಿದರು.
ಮುಖ್ಯ ಅತಿಥಿಗಳಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ದೇವತಾರಾಧನ ಸಮಿತಿ ಅಧ್ಯಕ್ಷ ಶಶಿಧರ ನಾಯರ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ, ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿಕ್ಷಕಿ ಶ್ರೀಮತಿ ಜಾನಕಿ, ಶಿಕ್ಷಕಿ ಶ್ರೀಮತಿ ರಾಧಮ್ಮ, ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ, ಸುಬ್ರಹ್ಮಣ್ಯ ಮದುವೆಗದ್ದೆ, ಚಂದ್ರಯಾನ ಉಡಾವಣೆಯ ಜತೆ ಸಹಕರಿಸಿದ ವೇಣುಗೋಪಾಲ್ ಭಟ್ ಹಾಗೂ ಪದ್ಮನಾಭ ಪಾನತ್ತಿಲ ಇವರುಗಳನ್ನು ಸನ್ಮಾನಿಸಲಾಯಿತು. ಶ್ರೀಮತಿ ರಾಜೇಶ್ವರಿ ಸನ್ಮಾನ ಪತ್ರ ವಾಚಿಸಿದರು.

ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾನತ್ತಿಲ ಸ್ವಾಗತಿಸಿ, ಗಣೇಶೋತ್ಸವ ಸಮಿತಿ ಸಂಚಾಲಕ ರಾಘವ ರಾವ್ ವಂದಿಸಿದರು. ಶ್ರೀಮತಿ ಶ್ರೀಲತಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ನಂತರ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಇಂದು ಬೆಳಿಗ್ಗೆ ಗಣಪತಿ ಹವನ, ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಸಂಜೆ ಬ್ಯಾಂಡು ವಾಲಗ, ಸಿಡಿಮದ್ದುಗಳೊಂದಿಗೆ ಶ್ರೀ ಗಣೇಶನ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ನಡೆಯಲಿದೆ.