ಪ್ರಗತಿ ವಿದ್ಯಾಸಂಸ್ಥೆಯ ಕಾಣಿಯೂರಿನ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುವ ಮೋನಿಷ್ ಟಿ ಯೋಗದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಬರೆಸಿದ್ದಾರೆ.
ಪೂರ್ಣ ಉಷ್ಟ್ರಸನಾ ದಲ್ಲಿ ಇಪ್ಪತೈದು ನಿಮಿಷ ಹದಿನೇಳು ಸೆಕುಂಡು ಗಳ ಕಾಲ ಒಂದೇ ಸ್ಥಿತಿಯಲ್ಲಿ ಇರುವುದರ ಮೂಲಕ ತನ್ನ ಹೆಸರನ್ನು
ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಬರೆಸಿಕೊಂಡಿದ್ದಾರೆ.
ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಮತ್ತು ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆಸಿಕೊಂಡಿರುವ ಇವರು ಅಮರ ಪಡ್ನೂರು ಗ್ರಾಮದ ವಿಶ್ವನಾಥ ತಂಟೆಪ್ಪಾಡಿ ಮತ್ತು ದಯಾಮಣಿ ಯವರ ಪುತ್ರ. ಇವರು ಯೋಗಗುರುಗಳಾದ ಸಂತೋಷ್ ಮುಂಡಕಜೆ ಮತ್ತು ಶಾಲಾಯೋಗ ಶಿಕ್ಷಕಿ ಶಶಿಕಲಾ ಇವರಿಂದ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ.