ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ಐ ಫೋನ್ 15 ಸೀರೀಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ

0

ಆ್ಯಪಲ್ ಅಧಿಕೃತವಾಗಿ ಸ್ಮಾರ್ಟ್ ಫೋನ್ ಐ ಫೋನ್ 15 ಸೀರೀಸ್ ನ್ನು ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯದಲ್ಲೇ ಪ್ರಥಮ ಬಾರಿಗೆ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಪ್ರಥಮ ಗ್ರಾಹಕರಾಗಿ ಉದ್ಯಮಿ ಅಬ್ದುಲ್ ರಹಿಮಾನ್, ದ್ವಿತೀಯ ಗ್ರಾಹಕರಾಗಿ ಕು. ಅಭಿಜ್ಞಾ ರ ಪರವಾಗಿ ಅವರ ತಂದೆ ರಾಧಾಕೃಷ್ಣ ಕೊನಾರ್ಕ್ ಮೊಬೈಲ್ ಖರೀದಿಸಿದರು.

ಸಂಸ್ಥೆಯ ಹಿತೈಷಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯ ಎಲ್ಲರನ್ನು ಸ್ವಾಗತಿಸಿದರು. ಸುದ್ದಿ ವರದಿಗಾರ ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕ ಮಾತನಾಡಿದರು.