ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

0

ನಿವ್ವಳ ಲಾಭ 82,628.65,ಸದಸ್ಯರಿಗೆ ಶೇ.10 ಡಿವಿಡೆಂಡ್

ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಶ್ಯಾನುಭೋಗ್ ರವರ ಅಧ್ಯಕ್ಷತೆಯಲ್ಲಿ ಸೆ.12 ರಂದು ನಡೆಯಿತು.


ಸಂಘದ ಕಾರ್ಯದರ್ಶಿ ಚಂದ್ರಶೇಖರ ಗೌಡ ಪಿ. ವರದಿ ಮಂಡಿಸಿದರು.
ಸಂಘದ ಲೆಕ್ಕಪತ್ರವನ್ನು ವಿಸ್ತರಣಾಧಿಕಾರಿ ನಾಗೇಶ ಕೆ.ಮಂಡಿಸಿದರು.
ಸಂಘವು 2022 – 23 ರಲ್ಲಿ ನಿವ್ವಳ ಲಾಭ 82,628.65,ಸದಸ್ಯರಿಗೆ ಪ್ರತೀ ಲೀಟರಿಗೆ 0.38 ಪೈಸೆ ಬೋನಸ್ಸು ಹಾಗೂ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಯಿತು.
ಅತೀ ಹೆಚ್ಚು ಹಾಲು ಪೂರೈಸಿದ ಮಮತ ಡಿ.ಆಳ್ವ, ಲಕ್ಷ್ಮೀನಾರಾಯಣ ಶ್ಯಾನುಭಾಗ್ , ಲೋಕೇಶ ಪೂಜಾರಿಯವರಿಗೆ ಬಹುಮಾನ ವಿತರಿಸಲಾಯಿತು.
ಗುಣಮಟ್ಟದ ಹಾಲು ಪೂರೈಸಿದ ಭವಾನಿ ಪರನೀರು, ವಸಂತ ನೆಟ್ಟಾರು, ಮಹಾಬಲ ಪೂಜಾರಿ ಯವರಿಗೆ ಬಹುಮಾನ ನೀಡಲಾಯಿತು.
ಹಾಗೂ 2022-23 ರಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ನಿರ್ದೇಶಕ ವಸಂತ ವಿ.ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ಪರಮೇಶ್ವರ ಭಟ್ ಕಜೆ ವಂದಿಸಿದರು.
ಸಿಬ್ಬಂದಿಗಳಾದ ಜಯಂತಿ ರೈ,ಕಿಶೋರ್ ಕುಮಾರ್ ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.