ಸುಳ್ಯ ನಗರ ಪಂಚಾಯತ್ ನ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ, ಜಖಂ

0

ಸುಳ್ಯದ ನಗರ ಪಂಚಾಯತ್ ಮುಂಭಾಗದಲ್ಲಿ ಎರಡು ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಅಪಘಾತಕ್ಕೀಡಾದ ಎರಡೂ ಬೈಕುಗಳು ಜಖಂಗೊಂಡಿರುವ ಘಟನೆ ಇದೀಗ ನಡೆದಿದೆ.

ನಗರ ಪಂಚಾಯತ್ ಕಡೆಯಿಂದ ಹೊರಡುತ್ತಿದ್ದ ಬೈಕ್ ಗೆ ಸುಳ್ಯ ಜೂನಿಯರ್ ಕಾಲೇಜ್ ರಸ್ತೆ ಬದಿಯಿಂದ ಮೇಲಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಸಂಭವಿಸಿದ್ದು ಗುದ್ದಿದ ರಭಸಕ್ಕೆ ಎರಡೂ ಬೈಕ್ ಜಖಂಗೊಂಡಿದೆ. ಆದರೆ ಸವಾರರಿಬ್ಬರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.