ನಾಲ್ಕೂರು : ಸ್ವಚ್ಚ ಅಭಿಯಾನ ಬೆಂಬಲಿಸಿ ಬೃಹತ್ ಸ್ವಚ್ಚತಾ ಶ್ರಮದಾನ

0

100 ಕ್ಕೂ ಅಧಿಕ ಮಂದಿ ಭಾಗಿ, 5 ಕಿ.ಮೀ ರಾಜ್ಯ ಹೆದ್ದಾರಿ ಸ್ವಚ್ಚ

ಸ್ವಚ್ಛತೆಗೆ ಮಾದರಿಯಾಗುತ್ತಿದೆ ಗುತ್ತಿಗಾರು

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ನ ಮಾರ್ಗದರ್ಶನದಲ್ಲಿ ಮತ್ತು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮುತುವರ್ಜಿಯಿಂದ ಆರಂಭವಾದ ಗ್ರಾಮ ಮಟ್ಟದ ಸ್ವಚ್ಚತಾ ಅಭಿಯಾನಕ್ಕೆ ಪೂರಕವಾಗಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ
ನಾಲ್ಕೂರು ಗ್ರಾಮದಲ್ಲೂ ಸ್ವಚ್ಚ ಅಭಿಯಾನ ಬೆಂಬಲಿಸಿ ಸ್ವಚ್ಚತಾ ಶ್ರಮದಾನ ಸೆ.22 ರಂದು ಅಭೂತಪೂರ್ವವಾಗಿ ನಡೆಯಿತು.

ಗುತ್ತಿಗಾರು ಗ್ರಾ.ಪಂ ನ ಪಿಡಿಒ ಧನಪತಿ ಚಾಲನೆ ನೀಡಿದರು.
ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಸ್ವಚ್ಚತಾ ಟಾಸ್ಕ್ ಫೋರ್ಸ್‌ ನ ಕೆಲಸದಂತೆ ನಾಲ್ಕೂರಿನಲ್ಲೂ ಗುತ್ತಿಗಾರಿನ ನಾಲ್ಕೂರು ಗ್ರಾಮದ ಒಂದನೇ ವಾರ್ಡ್ ನಲ್ಲಿ ಶ್ರಮದಾನ ನಡೆಯಿತು.
ಹಾಲೆಮಜಲು ಶಾಲಾ ಬಳಿಯಿಂದ ಮರಕತದವರೆಗೆ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆದಿದ್ದು ಗ್ರಾಮಸ್ಥರು ಸ್ವಯಂ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಬಿದ್ದ ಕಸ ಹೆಕ್ಕಲಾಯಿತು. ಕೆಲ ಕಡೆ ಅಗತ್ಯ ಇರುವಲ್ಲಿ ಹಾರೆ, ಪಿಕ್ಕಾಸಿ ಹಿಡಿದು ಕೆಲಸ ಮಾಡಲಾಯಿತು . ರಸ್ತೆಯ ಎರಡು ಬದಿಗಳಲ್ಲಿ ಸುಮಾರು 6 ಕಳೆಕೊಚ್ಚುವ ಯಂತ್ರಗಳಿಂದ ಕಳೆ ಹೆರೆದು ನಂತರ ಸ್ವಚ್ಛತೆ ಮಾಡಲಾಯಿತು. ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಮರಕತ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಇತರೇ ಸಮಿತಿಗಳು, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಮರಕತ ನಡುಗಲ್ಲು, ಗ್ರಾಮ ವಿಕಾಸ ಸಮಿತಿ ನಾಲ್ಕೂರು, ನಡುಗಲ್ಲು ವರ್ತಕರು, ಸನ್ನಿದಿ ನವೋದಯ ಸಂಘ, ದೀಪ ಸಂಜೀವಿನಿ,ನಾಗಶ್ರೀ ಸಂಜೀವಿನಿ, ಪುಣ್ಯ ಸಂಜೀವಿನಿ, ಮೂಕಾಂಬಿಕ ಸಂಜೀವಿನಿ ಸಂಘ, ಜ್ಯೋತಿ ಶ್ರೀ ಶಕ್ತಿ, ಶ್ರೀ ದುರ್ಗಾ ಶ್ರೀ ಶಕ್ತಿ, ಶಿವಶಕ್ತಿ ಶ್ರೀ ಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸೇವಾ ಪ್ರತಿನಿಧಿ, ಧರ್ಮಸ್ಥಳ ಸಂಘ, ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಪ್ರಮೀಳ ಬಾಸ್ಕರ ಎರ್ದಡ್ಕ,ಹರೀಶ್ ಕೊಯಿಲ, ಲೀಲಾವತಿ ಅಂಜೇರಿ ಹಾಗೂ ವಾಹನದ ವ್ಯವಸ್ಥೆಯಲ್ಲಿ ಭಾಸ್ಕರ ಎರ್ದಡ್ಕ, ಸತೀಶ್ ಎರ್ದಡ್ಕ, ಸುಬ್ರಹ್ಮಣ್ಯ ಪಾಲ್ತಾಡು, ವಸಂತ ಉತ್ರಂಬೆ ಮತ್ತು ಕುಸುಮಾದರ ನೆಲ್ಲಿಪುಣಿ ಪಾನೀಯ ವ್ಯವಸ್ಥೆಯಲ್ಲಿ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ, ನಡುಗಲ್ಲು ಅಂಗನವಾಡಿ ಸಹಾಯಕಿ, ಚಹಾ ತಿಂಡಿ ಊಟ ದೇವಸ್ಥಾನದಿಂದ,
ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು,ಉಪಾಧ್ಯಕ್ಷರು ಎಂ.ಬಿಕೆ,ಎಲ್.ಸಿ.ಆರ್.ಪಿ ಗಳು,ಕೃಷಿ ಸಖಿ, ಶ್ರಮ ಸೇವಕರು ಮತ್ತಿತರರು ಉಪಸ್ಥಿತರಿದ್ದರು.