ಕೋಟೆ ಮುಂಡುಗಾರು: 32 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಮೆರುಗು ಹೆಚ್ಚಿಸಿದ “ಶೂರ್ಪನಖಾ ಮಾನಭಂಗಾ – ಖರಾಸುರ ವಧೆ” “ಇಂದ್ರಜಿತು ಕಾಳಗ” ಯಕ್ಷಗಾನ ಪ್ರದರ್ಶನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆ ಮುಂಡುಗಾರು ವತಿಯಿಂದ ಸೆ.19 ರಂದು ಕೋಟೆಮುಂಡುಗಾರು ಶಾಲಾ ವಠಾರದಲ್ಲಿ 32 ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯಿತು. ಬೆಳಗ್ಗೆ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಯಿತು‌.

ಬಳಿಕ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನೆ ನಡೆಯಿತು. ಗಣಪತಿ ಹವನ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ನಡೆಯಿತು. ಪ್ರಸಾದ ಭೋಜನ ನಡೆದು. ಅಪರಾಹ್ನ ಯುವಕ ಮಂಡಲ ಕಳಂಜ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಸಹಯೋಗದಲ್ಲಿ ತರಬೇತಿ ಪಡೆದ ಮಕ್ಕಳ ತಂಡದಿಂದ ” ಶೂರ್ಪನಖಾ ಮಾನಭಂಗಾ – ಖರಾಸುರ ವಧೆ” ಯಕ್ಷಗಾನ ನಡೆಯಿತು. ಬಳಿಕ ಯುವಕ ಮಂಡಲ‌ ಕಳಂಜ ಇದರ ಹವ್ಯಾಸಿ ಕಲಾವಿದರಿಂದ “ಇಂದ್ರಜಿತು ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಿತು. ಎರಡೂ ಯಕ್ಷಗಾನ ಪ್ರಸಂಗ ಅದ್ಬುತವಾಗಿ ಮೂಡಿಬಂತು.

ಬಳಿಕ ಸಂಜೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ರಾತ್ರಿ ಕೋಟೆಮುಂಡುಗಾರಿನಿಂದ ಶೋಭಾಯಾತ್ರೆಯಲ್ಲಿ ಬ್ಯಾಂಡ್ ವಾಲಗದೊಂದಿಗೆ ಸಾಗಿಸಲಾಯಿತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಅರ್ಪಿಸಿದ ಹಣ್ಣು ಕಾಯಿ, ಪೂಜೆ ಸ್ವೀಕರಿಸಲಾಯಿತು. ಅಯ್ಯನಕಟ್ಟೆಯ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಳಿಕ ಗಣಪತಿ ಮೂರ್ತಿಯನ್ನು ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.

ಕಾರ್ಯಕ್ರಮ ಯಶಸ್ವಿಯಾಗಲು
ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಕಾವಿನಮೂಲೆ, ಕಾರ್ಯದರ್ಶಿ ಲಕ್ಷ್ಮೀಶ ಕಜೆಮೂಲೆ, ಗೌರವಾಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಸ್ಥಾಪಕಾಧ್ಯಕ್ಷ ಕೆದಿಲ ಕೃಷ್ಣ ಭಟ್, ಸ್ಥಾಪಕ ಕಾರ್ಯದರ್ಶಿ ಶ್ರೀ ಕೃಷ್ಣ ಚೊಕ್ಕಾಡಿ, ಕೋಶಾಧಿಕಾರಿ ಚಂದ್ರಶೇಖರ ಕಜೆಮೂಲೆ, ಉಪಾಧ್ಯಕ್ಷ ಶಿವಪ್ರಸಾದ್ ಮುಂಡುಗಾರು, ಜತೆ ಕಾರ್ಯದರ್ಶಿ ದಿನೇಶ್ ಪಾಂಡಿಪಾಲು, ಕ್ರೀಡಾ ಕಾರ್ಯದರ್ಶಿ ಸತೀಶ್ ದಳ, ಸಾಂಸ್ಕೃತಿಕ ಕಾರ್ಯದರ್ಶಿ ಮಧುರಾ ತೋಟದಮೂಲೆ ಹಾಗೂ ಗಣೇಶೋತ್ಸವ ಸಮತಿಯ ಸದಸ್ಯರು ದುಡಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಲಕ್ಷ್ಮೀ ಶ ರೈ ಗುರಿಕ್ಕಾನ, ಬಾಗವತರಾದ ಸುರೇಶ್ ಅಗಲ್ಪಾಡಿ, ಸಹಕಾರ ನೀಡಿದ ರಮೇಶ್ ಕೋಡಿಯಡ್ಕ, ಗಣಪತಿ ಪೀಠದ ಮರದಾನಿಗಳಾದ ರಾಮಣ್ಣ ನಾಯ್ಕ ಮಾಪಳಗುಂಡಿ, ಅವರುಗಳನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.