ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸುಳ್ಯದ ತೋಟಗಾರಿಕಾ ಇಲಾಖೆ , ನಾಡಮಾವು ಮತ್ತು ಹಲಸು ಸಂರಕ್ಷಣಾ ಬಳಗ ಸುಳ್ಯ ಇದರ ಸಹಯೋಗದಲ್ಲಿ ನಾಡಮಾವು ಮತ್ತು ಹಲಸು ಸಂರಕ್ಷಣೆ , ಗಿಡಸವರುವಿಕೆ ಹಾಗೂ ಕಸಿಕಟ್ಟುವ ತರಬೇತಿ ಕಾರ್ಯಾಗಾರವು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಸೆ.24ರಂದು ನಡೆಯಿತು.
ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೆ.ಪಿ. ಜಗದೀಶ್ ಅವರ ಮುಂದಾಳತ್ವದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಅವರು ಉದ್ಘಾಟಿಸಿ, ಶುಭಹಾರೈಸಿದರು. ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ನಮಾಮಿ ಬಳಗದ ಜಯರಾಮ ಮುಂಡೋಳಿಮೂಲೆ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೇಂದ್ರ ಕುಮಾರ್ ಜೈನ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ನಮಾಮಿ ಬಳಗದ ಶ್ರೀಶಕುಮಾರ್ ಎಂ.ಎಸ್., ಡಿ.ಆರ್.ಎಫ್.ಒ. ಚಂದ್ರು ಬಿ.ಜಿ., ಕಸಿ ತರಬೇತುದಾರರುಗಳಾಗಿ ಶ್ಯಾಮ್ ಭಟ್ ಕಲ್ಮಡ್ಕ, ಸೆಲ್ವೆಸ್ಟರ್ ಡಿಸೋಜ, ಜಗದೀಶ್ ಪರಮಲೆ, ಜಾಕಬ್ ಡಿಸೋಜ ಅವರು ಭಾಗವಹಿಸಿ,ಕಸಿಕಟ್ಟುವ ವಿಧಾನದ ಕುರಿತು ತರಬೇತಿ ನೀಡಿದರು. ಸಹಕಾರಿ ಸಂಘದ
ಅದ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ಕೃಷಿ ತೋಟದಲ್ಲಿ ಗಿಡಸವರುವಿಕೆ ಕುರಿತು ಮಾಹಿತಿ ನೀಡಲಾಯಿತು.
ಎಸ್.ಪಿ. ಲೋಕನಾಥ್ ಹಾಗೂ ಗಣಪತಿ ಭಟ್, ಸಹಕಾರಿ ಸಂಘದ ಸಿಬ್ಬಂದಿಗಳು, ತೋಟಗಾರಿಕಾ ಇಲಾಖೆಯ ಸಿಬ್ಬಂದಿಗಳು, ಕಾರ್ಯಕ್ರಮಕ್ಕೆ ಸಹಕರಿಸಿದರು.