ಸುಳ್ಯ ಟಿಎಪಿಸಿಎಂಎಸ್‌ ವಾರ್ಷಿಕ‌ ಮಹಾಸಭೆ

0

ಸುಳ್ಯ ಟಿಎಪಿಸಿಎಂಎಸ್‌ ವಾರ್ಷಿಕ‌ ಮಹಾಸಭೆ

ಸುಳ್ಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಇದರ ಆಡಳಿತ ಮಂಡಳಿ ವಾರ್ಷಿಕ ಮಹಾಸಭೆಯು ಸೆ.25 ರಂದು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವರದಿ ಸಾಲಿನಲ್ಲಿ ಸಂಘವು 2 ಲಕ್ಷದ 58 ಸಾವಿರ ಲಾಭಗಳಿಸಿದೆ. ಸಂಘದ ಕಾರ್ಯದರ್ಶಿ ಜಯರಾಮ ದೇರಪ್ಪಜ್ಜನಮನೆ ವರದಿ ಮಂಡಿಸಿದರು.

ಬೀಳ್ಕೊಡುಗೆ : ಸಂಘದಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಸದಾಶಿವರು ಸೆ.30 ರಂದು‌ ನಿವೃತ್ತರಾಗಲಿದ್ದು ಅವರಿಗೆ ಸಂಘದ ವತಿಯಿಂದ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ನಿರ್ದೇಶಕರುಗಳಾದ ಪಿ.ಸಿ.ಜಯರಾಮ, ಸೋಮಶೇಖರ್ ಕೊಯಿಂಗಾಜೆ, ಮಹಮ್ಮದ್ ಫವಾಜ್, ವಿನೂಪ್ ಮಲ್ಲಾರ, ಅಶ್ವಿನಿ ಅಂಬೆಕಲ್ಲು, ಹೇಮಲತಾ, ಚಂಚಲ ಸನತ್ ವೇದಿಕೆಯಲ್ಲಿದ್ದರು.