ಸುಬ್ರಹ್ಮಣ್ಯ ಇನ್ನರ್ವೀನ್ ಕ್ಲಬ್ ವತಿಯಿಂದ ಏನೇಕಲ್ಲು ಅಂಗನವಾಡಿ ಶಾಲೆಯಲ್ಲಿ ಮಹಿಳೆಯರಿಗಾಗಿ ಪೌಷ್ಟಿಕ ಆಹಾರ ತಯಾರಿ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಏನೆಕಲ್ಲು ಅಂಗನವಾಡಿಯ ಪೋಷಕರು ಹಾಗೂ ಆಸುಪಾಸಿನ ಸುಮಾರು 50 ಮಹಿಳೆಯರು ಈ ಪೌಷ್ಟಿಕ ಆಹಾರ ತಯಾರಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ ಯನ್ನು ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭಾನುಮತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದಿ. ಹರಿಶ್ಚಂದ್ರ ಚಿದ್ಗಲ್ ಏನೆಕಲ್ಲು ರವರ ಸ್ಮರಣಾರ್ಥ ಮೊಮ್ಮಗಳು ಲೌಕ್ಯ ಕೌಶಿಕ್ ಚಿದ್ಗಲ್ ರವರು 25 ಚಯರ್ ಗಳನ್ನು ಅಂಗನವಾಡಿ ಕೇಂದ್ರಕ್ಕೆ ನೀಡಿದರು. ಸುಬ್ರಹ್ಮಣ್ಯ ಇನ್ನರ್ವೀನ್ ಕ್ಲಬ್ ವತಿಯಿಂದ 20 ನೀರಿನ ಬಾಟಲಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷ ವೇದ ಶಿವರಾಮ್, ಪೂರ್ವ ಅಧ್ಯಕ್ಷ ಸರೋಜಾ ಮಾಯಿಲಪ್ಪ, ಸದಸ್ಯ ಶ್ರೀಜಾ ಚಂದ್ರಶೇಖರ್, ಅಂಗನವಾಡಿ ವಲಯ ಮೇಲ್ವಿಚಾರಕಿ ದೀಪಿಕಾ, ಬಾಲ ವಿಕಾಸ ಅಂಗನವಾಡಿ ಸಮಿತಿ ಅಧ್ಯಕ್ಷ ನಳಿನಿ ಭರತ್ ಪಿ, ಅಂಗನವಾಡಿ ಕಾರ್ಯಕರ್ತೆ ಜಯ ರಮೇಶ್, ಮಕ್ಕಳ ಪೋಷಕರು ಹಾಗೂ ಊರ ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.