ಕುಂಞಮ್ಮ ಅಲೆಕ್ಕಾಡಿ ನಿಧನ

0

ಮುರುಳ್ಯ ಗ್ರಾಮದ ಅಲೆಕ್ಕಾಡಿ ದಿ. ಕನ್ನ ಬೆಳ್ಚಡ ರವರ ಪತ್ನಿ ಕುಂಞಮ್ಮರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.26 ರಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಇವರು ನಿವೃತ್ತ ಅಂಗನವಾಡಿ ಸಹಾಯಕಿಯಾಗಿ ಉತ್ತಮ ಸೇವೆಗೈದು ಕುಂಞಮ್ಮಕ್ಕ ಎಂದೇ ಜನಾನುರಾಗಿದ್ದರು.
ಮೃತರು ಪುತ್ರರಾದ ಕೃಷ್ಣನ್ ಕಾಸರಗೋಡು,

ನಾರಾಯಣನ್ ಕಾಸರಗೋಡು, ಶಿವಕುಮಾರನ್ ಅಲೆಕ್ಕಾಡಿ, ಪುತ್ರಿ ಶೀಲಾವತಿ ನಾರಾಯಣನ್ ಕಾಸರಗೋಡು, ಸೊಸೆಯಂದಿರಾದ ದಯಾವತಿ, ಬಿಂದು, ಲೀಲಾವತಿ ಹಾಗೂ ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.