ಸುಳ್ಯ‌ದಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ ಆರಂಭ : ಉಸ್ತುವಾರಿ ಮಮತಾ ಗಟ್ಟಿ ನೇತೃತ್ವ

0

ಕಿಕ್ಕಿರಿದ ಸಭಾಂಗಣ: ಶಿಸ್ತುಕ್ರಮಕ್ಕೊಳಪಟ್ಟ ನಾಯಕರೂ ಭಾಗಿ

ಮಾಧ್ಯಮಗಳಿಗೆ ಪ್ರವೇಶ ನಿರಾಕರಣೆ; ಸಭೆಯ ಬಳಿಕ ಪತ್ರಿಕಾಗೋಷ್ಠಿ

ವಿಧಾನಸಭಾ ಚುನಾವಣಾ ಬಳಿಕ ಸುಳ್ಯ ಬ್ಲಾಕ್ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಗೊಂದಲಗಳು ಇನ್ನೂ ಮುಂದುವರಿದಿರುವಂತೆ, ಇಂದು ಕಾರ್ಯಕರ್ತರ ಸಭೆ ಸುಳ್ಯ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಯುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಇತ್ತೀಚೆಗೆ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರ ನೇಮಕವಾಗಿದ್ದು, ಕಾಂಗ್ರೆಸ್ ಅಸಮಾಧಾನಿತ ಗುಂಪು ಕಾಂಗ್ರೆಸ್ ಉಳಿಸಿ ಸಭೆ

ನಡೆಸಿದ ಬೆನ್ನಲ್ಲೆ ಇಂದು ಬ್ಲಾಕ್ ಕಾಂಗ್ರೆಸ್ ಸಭೆ ಆಯೋಜಿಸಿದ್ದು ಈ ಸಭೆಗೆ ಕಾಂಗ್ರೆಸ್ ಉಸ್ತುವಾರಿ ಮಮತಾ ಗಟ್ಟಿ ಆಗಮಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಸಹಿತ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಿದ್ದಾರೆ.

ಉಚ್ಚಾಟನೆ ಗೊಳಗಾಗಿರುವ ಕಾಂಗ್ರೆಸ್ ನಾಯಕರೂ ಕೂಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭಾಂಗಣ ಕಿಕ್ಕಿರಿದು ತುಂಬಿದೆ.

ಸಭಾಂಗಣದೊಳಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಸಭೆಯ ಬಳಿಕ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡುವುದಾಗಿ ನಾಯಕರು ಸಭೆಗೆ ಹೋದ ಪತ್ರಕರ್ತರಲ್ಲಿ ವಿನಂತಿಸಿದ್ದಾರೆ.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಪ್ರಮುಖರಾದ ರಾಜೀವಿ ಆರ ರೈ, ಗೀತಾ ಕೋಲ್ಚಾರ್, ಭರತ್ ಮುಂಡೋಡಿ,

ಪಿ.ಎಸ್.ಗಂಗಾಧರ್, ಸದಾನಂದ ಮಾವಜಿ ಹಾಗೂ ಶಿಸ್ತು ಕ್ರಮಕ್ಕೆ ಒಳಗಾಗಿರುವ ಎಂ.ವೆಂಕಪ್ಪ ಗೌಡ, ಮಹೇಶ್ ಕುಮಾರ್ ಕರಿಕ್ಕಳ, ಕೆ ಗೋಕುಲ್ ದಾಸ್ ಸಹಿತ ಎಲ್ಲ ನಾಯಕರು ಸಭೆಯಲ್ಲಿ ಹಾಜರಿದ್ದಾರೆ.