ಆಲೆಟ್ಟಿಯಲ್ಲಿ ಉಚಿತ ಕಣ್ಣಿನ ಪರೀಕ್ಷೆ – 173 ಮಂದಿಗೆ ಕನ್ನಡಕ ವಿತರಣೆ

0

ರೋಟರಿ ಕ್ಲಬ್ ಸುಳ್ಯ ಸಿಟಿ, ಇನ್ನರ್ ವ್ಹೀಲ್ ಕ್ಲಬ್ ಸುಳ್ಯ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಗ್ರಾಮ ಪಂಚಾಯತ್ ಆಲೆಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಲೆಟ್ಟಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಳ್ಯ, ದ. ಕ ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಮಂಗಳೂರು, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಲೆಟ್ಟಿ ಗ್ರಾಮ ಹಾಗೂ ಜನನಿ ಪ್ರೆಂಡ್ಸ್ ಕ್ಲಬ್ ಗುಂಡ್ಯ, ಆಲೆಟ್ಟಿ ಸಹಯೋಗದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಸೆ.26 ರಂದು ಆಲೆಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇದರ ಮುಖ್ಯಸ್ಥೆ ಡಾ| ಗೌರಿ ಪೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು,
ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೊ| ಗಿರೀಶ್ ನಾರ್ಕೋಡುರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸರ್ವರನ್ನು ಸ್ವಾಗತಿಸಿದರು. ದ. ಕ ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆಯ ನೇತ್ರಾಧಿಕಾರಿ ರೊ| ಶಾಂತರಾಜ್ ಕಣ್ಣಿನ ಪರೀಕ್ಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು,ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಲೆಟ್ಟಿ ಇದರ ಅಧ್ಯಕ್ಷರಾದ ಕರುಣಾಕರ ಹಾಸ್ಪರೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಳ್ಯದ ನೇತ್ರಾಧಿಕಾರಿ ಯಶೋದಮ್ಮ, ರೋಟರಿ ಕ್ಲಬ್ ಸುಳ್ಯ ನಿಕತಪೂರ್ವದ್ಯಕ್ಷ ರೊ| ಮುರಳೀಧರ ರೈ, ಜನನಿ ಪ್ರೆಂಡ್ಸ್ ಕ್ಲಬ್ (ರಿ) ಗುಂಡ್ಯ, ಆಲೆಟ್ಟಿ ಇದರ ಅಧ್ಯಕ್ಷ ಲತೀಶ್ ಗುಂಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದುರು. ಇನ್ನರ್ ವ್ಹೀಲ್ ಕ್ಲಬ್ ಸುಳ್ಯದ ಅಧ್ಯಕ್ಷೆ ಸವಿತಾ ನಾರ್ಕೋಡು ಸರ್ವರಿಗೂ ವಂದಿಸಿದರು.


ಸುಮಾರು 187 ಮಂದಿ ಕಣ್ಣಿನ ಪರೀಕ್ಷೆಗೆ ಒಳಪಟ್ಟು 173 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಲೆಟ್ಟಿ ಗ್ರಾಮದ ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಸುಳ್ಯ ಸಿಟಿ, ಇನ್ನರ್ ವ್ಹೀಲ್ ಕ್ಲಬ್ ಸುಳ್ಯ ಹಾಗೂ ಜನನಿ ಪ್ರೆಂಡ್ಸ್ ಕ್ಲಬ್ (ರಿ) ಗುಂಡ್ಯ, ಆಲೆಟ್ಟಿ ಇದರ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.