ಅರಂಬೂರು ಅಂಬಿಕ ಮಹಿಳಾ ಮಂಡಲದಿಂದ ಶಿಕ್ಷಕರ ದಿನಾಚರಣೆ

0

ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಾಡ್ಕ ದ ಶಿಕ್ಷಕ ವೃಂದದವರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ, ಬಿಸಿ ಊಟ ತಯಾರಿಕ ಸಿಬ್ಬಂದಿಗಳಿಗೆ ಅಂಬಿಕಾ ಮಹಿಳಾ ಮಂಡಲದ ವತಿಯಿಂದ ಕೆಲವು ಸ್ಪರ್ಧೆ ಗಳನ್ನು ನಡೆಸಿ ಬಹುಮಾನವನ್ನು ನೀಡಿ ಗೌರವಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಸೆ.11 ರಂದು ಆಚರಿಸಲಾಯಿತು.

ಮಹಿಳಾ ಮಂಡಲ ದ ಪೂರ್ವಧ್ಯಕ್ಷೆ ಶ್ರೀಮತಿ ಸತ್ಯಭಾಮಾ ಭಟ್ ರವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಮಂಡಲ ದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಸಕಿ ಶ್ರೀಮತಿ ವಿಜಯಲಕ್ಷ್ಮಿ ಯರು ಹಾಗೂ ಸಹಶಿಕ್ಷಕ ಧನಂಜಯ ರವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಮಹಿಳಾ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಕವಿತಾ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ವೇದಾವತಿ ವಂದಿಸಿದರು. ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಕಾರ್ಯಕ್ರಮ ದಲ್ಲಿ ಸಹಕರಿಸಿದರು.