ಮೊಗರ್ಪಣೆ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಮಿಲಾದ್ ಆಚರಣೆ ಮತ್ತು ಆಕರ್ಷಕ ಕಾಲ್ನಡಿಗೆ ಜಾಥಾ

0

ಪೈಗಂಬರ್ ಮುಹಮ್ಮದ್ ರವರ ಜನ್ಮದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ಹಾಗೂ ಆಕರ್ಷಕ ಕಾಲ್ನಡಿಗೆ ಜಾಥಾ ಇಂದು ಮೊಗರ್ಪಣೆ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.


ಮೊಗರ್ಪಣೆ ದರ್ಗಾದಲ್ಲಿ ಝಿಯಾರತ್ ನೆರವೇರಿಸಿ ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ದ್ವಜಾರೋಹಣ ನೆರವೇರಿಸಿದರು.
ಬಳಿಕ ಈದ್ ಮಿಲಾದ್ ಅಂಗವಾಗಿ ಮೊಗರ್ಪಣೆ ಮಸೀದಿ ವಠಾರದಿಂದ ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳ ಜ್ಯೋತಿ ವೃತ್ತದ ವರೆಗೆ ಆಕರ್ಷಕ ರ್ಯಾಲಿ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಸ್ಥಳೀಯ ಮದರಸ ಮುಖ್ಯ ಗುರುಗಳು ಮತ್ತು ಅಧ್ಯಾಪಕ ವೃಂದದವರು, ಹಾಗೂ ಸ್ಥಳೀಯ ನೂರಾರು ಮುಸಲ್ಮಾನ ಬಾಂಧವರು ಭಾಗವಹಿಸಿದ್ದರು.
ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಹನೀಫ್ ಮತ್ತು ಪದಾಧಿಕಾರಿಗಳು,ಸದಸ್ಯರು, ಹಾಗೂ ಮಸೀದಿ ಸಹ ಸಂಘಟನೆಗಳ ಕಾರ್ಯಕರ್ತರು ಸಹಕರಿಸಿದರು.