ಪೈಚಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ ಮತ್ತು ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

0

ಪೈಚಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆಯ ಅಂಗವಾಗಿ ಇಲಲ್ ಹಬೀಬಿ ಮೀಲಾದ್ ಫೆಸ್ಟ್ ಹಾಗೂ ಮೌಲೂ lದ್ ಪಾರಾಯಣ ಕಾರ್ಯಕ್ರಮ ನಡೆಯಿತು.

ಖುವ್ವತ್ತುಲ್ ಇಸ್ಲಾಂ ಮದರಸಾ ವಿದ್ಯಾರ್ಥಿಗಳಿಂದ ಮೀಲಾದ್ ಫೆಸ್ಟ್ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೈಚಾರ್ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷರು ಶರೀಫ್ ಟಿ ಎ ವಹಿಸಿದ್ದರು.ಸ್ಥಳೀಯ ಮಸೀದಿ ಕಥೀಬರಾದ ಶಮೀರ್ ನಹೀಮಿ ದುವಾ ನೆರವೇರಿಸಿ ಮಿಲಾದ್ ಸಂದೇಶವನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮದರಸಾ ಮುಖ್ಯ ಅಧ್ಯಾಪಕರು ಮುಹಿಯ್ಯದ್ದೀನ್ ಲತೀಫ್ ಸಕಾಫಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಮದರಸಾ ಅಧ್ಯಾಪಕರಾದ ಹನೀಫ್ ಮದನಿ ಸಮಿತಿ ಉಪಾಧ್ಯಕ್ಷರು ಅಬ್ದುಲ್ ರಝಕ್ ಆರ್ತಾಜೆ,ಪೈಚಾರ್ ಅಲ್ ಅಮೀನ್ ಯೂಥ್ ಸೆಂಟರ್ ಅಧ್ಯಕ್ಷರ ಆಶ್ರಫ್ ಪೈಚಾರ್,
ಮುಅಲ್ಲಿಮ್ ರಾದ ಅಂಝತುಲ್ ಖರ್ರಾರ್,ಅಬ್ದುಲ್ ಹಿಮಮಿ ಕಾರ್ಯಧರ್ಶಿ ಹನೀಫ್ ಸುಫಾರಿ ಮೊದಲಾದವರು ಉಪಸ್ಥಿತರಿದ್ದರು. ಮಸ್ಜಿದ್ ಕಮಿಟಿಯ ಸದಸ್ಯರಾದ ಮುಜೀಬ್ ಪೈಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ಸ್ಥಳೀಯ ಸಹ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು, ಜಮಾಅತ್ ಕಮಿಟಿಯ ಸದಸ್ಯರುಗಳು ಸಹಕರಿಸಿದರು.