ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಆಶ್ರಯದಲ್ಲಿ ಸೆ. 28ರಿಂದ ಅ. 4 ರ ತನಕ ನಡೆಯಲಿರುವ 25ನೇ ವರ್ಷದ ಭಜನಾ ತರಬೇತಿ ಕಮ್ಮಟ ಕಾರ್ಯಗಾರದ ಉದ್ಘಾಟನೆಯು ಇಂದು ಬೆಳಗ್ಗೆ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ಕ್ಷೇತ್ರ ಆರತಿಪುರ ಮಂಡ್ಯ ಜಿಲ್ಲೆಯ
ಸಿದ್ಧಾಂತ ಕೀರ್ತಿ ಮಹಾಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಭಜನಾ ಕಮ್ಮಟ ಉದ್ಘಾಟಿಸಿದರು. ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನ್ ದಾಸ ಪರಮಹಂಸ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷರಾದ ಮಾತೃಶ್ರೀ ಡಾ.ಹೇಮಾವತಿ ವಿ ಹೆಗ್ಗಡೆ, ಡಿ .ಹರ್ಷೇಂದ್ರ ಕುಮಾರ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ ಸುರೇಶ್ ಮೊಯ್ಲಿ ಉಪಸ್ಥಿತರಿದ್ದರು. ಇಂದಿನಿಂದ ಅ. 4 ರ ತನಕ ನಡೆಯಲಿರುವ ಭಜನಾ ಕಮ್ಮಟದಲ್ಲಿ ಸುಮಾರು 200 ಮಿಕ್ಕಿ ಭಜನಾ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಭಜನಾ ಕಮ್ಮಟದ ಮಹಾಮಂಗಲೋತ್ಸವವು ಅ. 4 ರಂದು ನಡೆಯಲಿದ್ದು ಸುಮಾರು 300 ಭಜನಾ ತಂಡಗಳ 5,000 ಭಜಕರ ಭಜನಾ ಶೋಭಾ ಯಾತ್ರೆಯು ಸಾಗಿ ಬಂದು ಸಮಾರೋಪವಾಗಲಿರುವುದು.