ಸುಳ್ಯ ಪೇಟೆಯಲ್ಲಿ ಕಾರಿಗೆ ಕಾರು ಡಿಕ್ಕಿ , ಪರಾರಿ

0


ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಘಟನೆ ಇಂದು ಸುಳ್ಯದ ಶ್ರೀರಾಮ್ ಪೇಟೆಯ ರೈ ಇಂಡೇನ್ ಗ್ಯಾಸ್‌ನ ಎದುರುಗಡೆ ಸಂಭವಿಸಿದೆ.

ಸುಳ್ಯದಿಂದ ಗಾಳಿಮುಖಕ್ಕೆ ಹೋಗುತ್ತಿದ್ದ ಶಿಫ್ಟ್ ಕಾರಿಗೆ ಪುತ್ತೂರು ಕಡೆಯಿಂದ ಬರುತ್ತಿದ್ದ ಮತ್ತೊಂದು ಶಿಫ್ಟು ಕಾರುಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕಾರ್ಯಕ್ರಮಕ್ಕೆ ತೆರಳಿ ಗಾಳಿಮುಖಕ್ಕೆ ಹೋಗುತ್ತಿದ್ದ ಕಾರಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಸಣ್ಣ ಸಣ್ಣ ಆರು ಮಕ್ಕಳು ಕೂಡ ಇದ್ದರು.
ಘಟನೆಯಿಂದ ಚಾಲಕನ ಕಣ್ಣಿನ ಭಾಗಕ್ಕೆ ಗಾಯವಾಗಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಉಳಿದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ಕಾರು ಚಾಲಕ ತನ್ನ ಕಾರನ್ನು ನಿಲ್ಲಿಸದೆ ವೇಗವಾಗಿ ಸುಳ್ಯದ ಕಡೆ ಹೋಗಿದ್ದಾರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.