ಪೆರುವಾಜೆ ಗ್ರಾಮ ಪಂಚಾಯತ್ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0

ಪೆರುವಾಜೆ ಗ್ರಾಮ ಪಂಚಾಯತ್ ,ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಮತ್ತು ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟ ಇದರ ಸಹಯೋಗದೊಂದಿಗೆ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಗ್ರಾಮ ಪಂಚಾಯತ್ ವಠಾರ ಹಾಗೂ ರಸ್ತೆಬದಿಗಳಲ್ಲಿ ಸ್ವಚ್ಛತೆ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ಉಪಾಧ್ಯಕ್ಷೆ ಶಹಿನಾಜ್, ಗ್ರಾ.ಪಂ.ಸದಸ್ಯರು ,ಪಿ.ಡಿ.ಒ ಜಯಪ್ರಕಾಶ್ ಅಲೆಕ್ಕಾಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಠಲ ಶೆಟ್ಟಿ,ಕಾರ್ಯದರ್ಶಿ ದಯಾನಂದ ಹಾಗೂ ಸದಸ್ಯರು ,ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು,ಗ್ರಾಮಸ್ಥರು,ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.