ಅಡ್ಪಂಗಾಯದಲ್ಲಿ ಸ್ವಚ್ಛತಾ ಅಭಿಯಾನ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ವಾರ್ಡಿನಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಜ್ಜಾವರ ಪ್ರತಾಪ್ ಯುವಕ ಮಂಡಲ, ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ, ಎಸ್ ಎಸ್ ಎಫ್ ಇರುವಂಬಳ್ಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಅಡ್ಪಂಗಾಯದವರು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 12 ಘಂಟೆ ತನಕ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಹಾಗೂ ಅಡ್ಪಂಗಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರು ಶಾಸ್ತ್ರಿ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ ಕಲ್ತಡ್ಕ, ಅಜ್ಜಾವರ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಲೀಲಾ ಮನಮೋಹನ್, ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ, ಅಬ್ದುಲ್ಲಾ ಅಜ್ಜಾವರ, ಪ್ರತಾಪ್ ಯುವಕ ಮಂಡಲ ಗುರುರಾಜ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಿದ್ದಿಕ್ ಕೆ.ಎಂ., ಅಡ್ಕ ಎಸ್ ಎಸ್ ಎಫ್ ಅಧ್ಯಕ್ಷರಾದ ಅಬ್ಬಾಸ್ ಐ ಎಂ, ಶ್ರೀ ದುರ್ಗಾ ಫ್ರೆಂಡ್ಸ್ ಅಡ್ಪಂಗಾಯ ಅಧ್ಯಕ್ಷರಾದ ಅರುಣ್ ಕುಮಾರ್ ಕಲ್ತಡ್ಕ ಹಾಗೂ ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹಸೈನಾರ್ ಹಾಜಿ ಗೋರಡ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ ಇದರ ಮುಖ್ಯೋಪಾಧ್ಯಾಯರಾದ ಧನಲಕ್ಷ್ಮಿ, ಅಜ್ಜಾವರ ಗ್ರಾಮ ಪಂಚಾಯತಿ ಸಿಬ್ಬಂದಿಗಳು,ಎಲ್ಲಾ ಸಂಘಟನೆಯ ಸದ್ಯಸರು, ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಸ್ವಾಗತಿಸಿದರು. ಅಬ್ಬಾಸ್ ಎ.ಬಿ. ಕಾರ್ಯಕ್ರಮ ನಿರೂಪಿಸಿದರು.
ಅಡ್ಪಂಗಾಯ ಶಾಲೆಯಲ್ಲಿ ಸಿಹಿ ವಿತರಿಸಲಾಯಿತು.